ಕೊರೊನಾ ಜೊತೆ ಅನೇಕ ಫಂಗಸ್ ಈಗ ದಾಳಿಯಿಟ್ಟಿದೆ. ಜನರು ಭಯದಲ್ಲಿ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಅ
ಡುಗೆ ಮನೆ ಸ್ವಚ್ಛವಾಗಿದ್ದರೆ ಎಲ್ಲವೂ ಸ್ವಚ್ಛವಾಗಿದ್ದಂತೆ. ಅಡುಗೆ ಮನೆಯಲ್ಲಿರುವ ಬ್ಯಾಕ್ಟೀರಿಯಾ ದೇಹವನ್ನು ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಅಡುಗೆ ಮಾಡುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಡುಗೆ ಮಾಡಿದ ನಂತರವೂ ಕೈ ತೊಳೆಯಬೇಕು.
ಹಾಗೆ ಆಹಾರ ಸೇವನೆ ಮಾಡುವ ಮೊದಲು ಕೈ ತೊಳೆದುಕೊಳ್ಳಬೇಕು. ಮನೆಯಲ್ಲಿರುವ ವೃದ್ಧರು ಅಥವಾ ರೋಗಿಗಳು ವಾಂತಿ ಮಾಡಿಕೊಳ್ಳುತ್ತಿದ್ದರೆ ಕೈತೊಳೆದು ಅವರ ಕೆಲಸ ಮಾಡಬೇಕು. ಅವರ ಕೆಲಸ ಮುಗಿದ ನಂತ್ರವೂ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅಡುಗೆ ಮಾಡುವ ವೇಳೆ ಕೆಮ್ಮು, ಸೀನು ಬಂದಲ್ಲಿ ಮೂಗು ಮುಚ್ಚಿಕೊಂಡು ಸೀನಬೇಕು. ನಂತ್ರ ಅದನ್ನು ಡಸ್ಟ್ ಬಿನ್ ಗೆ ಹಾಕಬೇಕು.
ಅಡಿಗೆ ಮತ್ತು ಆಹಾರವನ್ನು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಸಂಪೂರ್ಣವಾಗಿ ದೂರವಿಡಲು ಕೆಲವು ವಿಷಯಗಳ ಬಗ್ಗೆ ಗಮನ ನೀಡಬೇಕು. ಅಡುಗೆ ಮಾಡುವಾಗ ಮಾಸ್ಕ್ ಧರಿಸಬೇಕು. ತಾಜಾ ತರಕಾರಿಗಳು ಅಥವಾ ಮಾಂಸವನ್ನು ಖರೀದಿಸಬೇಕು.
ತರಕಾರಿ ಅಥವಾ ಕಾಳುಗಳನ್ನು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಬಳಸುತ್ತಿರುವ ತರಕಾರಿಗಳು ತಾಜಾವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ. ತರಕಾರಿ ಬೇಯಿಸುವ ಮೊದಲು ಪಾತ್ರೆಗಳನ್ನು ಚೆನ್ನಾಗಿ ತೊಳೆಯಬೇಕು. ತರಕಾರಿ ಕತ್ತರಿಸುವ ಚಾಕುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.
ಫ್ರಿಜ್ ನಲ್ಲಿರುವ ವಸ್ತುಗಳನ್ನು ದೀರ್ಘಕಾಲದವರೆಗೆ ಬಳಸದಂತೆ ಎಚ್ಚರಿಕೆ ವಹಿಸಿ. ತಣ್ಣೀರಿನ ಬದಲು ತರಕಾರಿಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಅಡುಗೆ ಮಾಡಿದ ನಂತರ ಅಡುಗೆ ಸೋಡಾದಿಂದ ಇಡೀ ಅಡುಗೆಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅಡುಗೆ ಮನೆಯಲ್ಲಿ ಬಳಸುವ ಬಟ್ಟೆಗಳನ್ನು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಮಹಿಳೆಯರು ಇದನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಹೆಚ್ಚಿನ ಬ್ಯಾಕ್ಟೀರಿಯಾಗಳು ಅಡುಗೆ ಮನೆಯಲ್ಲಿರುತ್ತವೆ.