ಐಕ್ಯೂ ಸಾಮರ್ಥ್ಯವನ್ನ ಅಳೆಯಲು ಇಂಗ್ಲೆಂಡ್ನಲ್ಲಿ ನಡೆಸಲಾಗುವ ಮೆನ್ಸಾ ಪರೀಕ್ಷೆಯಲ್ಲಿ ಬರ್ಮಿಂಗ್ ಹ್ಯಾಮ್ನ 4 ವರ್ಷದ ಬಾಲಕಿ ಆಲ್ಬರ್ಟ್ ಐನ್ಸ್ಟೀನ್ರ ಐಕ್ಯೂ ಸಾಮರ್ಥ್ಯದ ಸಮೀಪ ಬರುವ ಮೂಲಕ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾಳೆ.
ಭಾರತೀಯ ಮೂಲದ ನಾಲ್ಕು ವರ್ಷದ ಬಾಲಕಿ ಕೇವಲ ಮೂರು ವರ್ಷ ವಯಸ್ಸಿನಲ್ಲೇ ಈ ಪರೀಕ್ಷೆಯನ್ನ ಎದುರಿಸುವ ಮೂಲಕ 148 ಐಕ್ಯೂ ಸಾಮರ್ಥ್ಯ ಪಡೆದಿದ್ದಾಳೆ.
ಈ ಮೂಲಕ ಐಕ್ಯೂ ಸಾಮರ್ಥ್ಯದಲ್ಲಿ ಆಲ್ಬರ್ಟ್ ಐನ್ಸ್ಟೀನ್ರಿಗಿಂತ ಕೇವಲ 18 ಅಂಕ ಹಿಂದಿದ್ದಾಳೆ. ದಯಾಲ್ ಕೌರ್ ಕೇವಲ 2 ವರ್ಷ ವಯಸ್ಸಿನವಳಾಗಿದ್ದಾಗ ನಭೋಮಂಡಲದ ಎಲ್ಲ ಗ್ರಹಗಳನ್ನ ಹೆಸರಿಸುತ್ತಿದ್ದಳು. ನಾಲ್ಕು ವರ್ಷ ವಯಸ್ಸಿನಲ್ಲೇ ಈಕೆಗೆ 5 ನೇ ತರಗತಿ ಮಕ್ಕಳು ಮಾಡುವ ಗಣಿತವನ್ನ ಬಿಡಿಸುವಷ್ಟು ಸಾಮರ್ಥ್ಯವಿದೆ.
ಮೆನ್ಸಾ ಮನಶಾಸ್ತ್ರಜ್ಞರು ನೀಡಿರುವ ಮಾಹಿತಿ ಮೆನ್ಸಾ ಬ್ರಿಟನ್ನಲ್ಲಿ ಅಗ್ರ 5 ಪ್ರತಿಶತವನ್ನ ಸ್ವೀಕರಿಸುತ್ತೆ. ದಯಾಲ್ ಅಗ್ರ 0.01ನೇ ಪ್ರತಿಶತದಲ್ಲಿದ್ದಾಳೆ. ಈಕೆ ಅಗ್ರದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದ್ದಾಳೆ. ಕೇವಲ ಮೂರು ವರ್ಷ ವಯಸ್ಸಿನಲ್ಲಿ ಈಕೆಯ ಐಕ್ಯೂ ಸಾಮರ್ಥ್ಯ 148 ಇದೆ. ಐನ್ಸ್ಟೀನ್ನ ಐಕ್ಯೂ ಸಾಮರ್ಥ್ಯ 160 ಇತ್ತು. ಐನ್ಸ್ಟೀನ್ ಐಕ್ಯೂ ಸಾಮರ್ಥ್ಯ ಅಳೆಯುವಾಗ ಅವರಿಗೆ ಎಷ್ಟು ವರ್ಷವಾಗಿತ್ತು ಅನ್ನೋದ್ರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ದಯಾಲ್ ತಂದೆ ಸರಬ್ಜೀತ್ ಹೇಳಿದ್ರು.
ಮಗಳ ಐಕ್ಯೂ ಸಾಮರ್ಥ್ಯ ಇಷ್ಟು ಚೆನ್ನಾಗಿ ಇರೋದ್ರಿಂದ ಆಕೆಯನ್ನ ಉನ್ನತ ತರಗತಿಗೆ ಸೇರಿಸಬೇಕು. ಈ ರೀತಿ ಮಾಡಿದ್ರೆ ಆಕೆಗೆ ಕಠಿಣ ಸಾಮರ್ಥ್ಯವನ್ನ ಎದುರಿಸೋದು ಸಾಧ್ಯವಾಗುತ್ತೆ ಎಂದು ಮನವಿ ಮಾಡಿದ್ದಾರೆ.
ದಯಾಲ್ ಮುಂದಿನ ದಿನಗಳ ವಿಶ್ವಕ್ಕೇ ನಾಯಕಿ ಆಗಬಹುದು. ನೊಬೆಲ್ ಪ್ರಶಸ್ತಿಯನ್ನ ಗೆಲ್ಲಬಹುದು. ಅಥವಾ ಕಾಫಿ ಶಾಪ್ನಲ್ಲಿ ಕಾಫಿಯನ್ನೂ ಮಾರಬಹುದು. ಅಥವಾ ಆಕೆಯ ಕನಸಿನ ಕೆಲಸಕ್ಕೆ ಸೇರಬಹುದು. ಆಕೆಗೆ ಇಷ್ಟವಾದ ಹಾಗೆ ಆಕೆ ತನ್ನ ಭವಿಷ್ಯ ಆರಿಸಿಕೊಳ್ಳಲಿ ಎಂದು ತಂದೆ ಹೇಳಿದ್ದಾರೆ.