ಬೆಳಗಾವಿ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರುಗಳೇ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ತಾಯಿ ಕೊರೊನಾದಿಂದ ಮೃತಪಟ್ಟ ನಾಲ್ಕುದಿನಗಳಲ್ಲಿ ವೈದ್ಯ ಮಗನೂ ಸೋಂಕಿಗೆ ಬಲಿಯಾಗಿದ್ದು, ತಂದೆಯೂ ಅನಾರೋಗ್ಯಕ್ಕೀಡಾಗಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಚಿಲ್ಡ್ರನ್ಸ್ ಹಾಸ್ಪಿಟಲ್ ಪ್ರೈ.ಲಿ. ಆಸ್ಪತ್ರೆಯ ಡಾ.ಮಹೇಶ್ ಪಾಟೀಲ್ (37) ಹಾಗೂ ಅವರ ತಾಯಿ ಸುಮಿತ್ರಾ ಪಾಟೀಲ್ ಕೋವಿಡ್ ಗೆ ಮೃತಪಟ್ಟವರು.
ಗೇಮ್ ಚೇಂಜರ್ ಆಗ್ಬಹುದು ಮಕ್ಕಳ ಕೊರೊನಾ ಲಸಿಕೆ
ಕೊರೊನಾ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ ಬೆನ್ನಲ್ಲೇ ಡಾ. ಮಹೇಶ್ ಪಾಟೀಲ್ ಅವರಿಗೆ ಕೆಲದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರು ಮನೆಯಲ್ಲಿಯೇ ಹೋಂ ಐಸೋಲೇಟ್ ಆಗಿದ್ದರು. ಉಸಿರಾಟದ ತೊಂದರೆ ಉಲ್ಭಣವಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಈ ವೇಳೆ ಅವರ ತಾಯಿ ಹಾಗೂ ತಂದೆಗೂ ಕೊರೊನಾ ಸೋಂಕು ದೃಢಪಟ್ಟು ತಾಯಿ ಸುಮಿತ್ರಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೊಂಬೆಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ 10 ಲಕ್ಷ ಖರ್ಚು ಮಾಡಿದ ಯುವಕ
ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ದಿನಗಳ ಹಿಂದೆ ಸುಮಿತ್ರಾ ಮೃತಪಟ್ಟಿದ್ದರು. ತಾಯಿ ಮೃತಪಟ್ಟಿರುವ ಬಗ್ಗೆ ಐಸಿಯುಗೆ ದಾಖಲಾಗಿರುವ ವೈದ್ಯ ಡಾ.ಮಹೇಶ್ ಅವರಿಗೆ ಮಾಹಿತಿಯೂ ಇರಲಿಲ್ಲ. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಡಾ.ಮಹೇಶ್ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಇತ್ತ ಅವರ ತಂದೆಯ ಅನಾರೋಗ್ಯವೂ ಬಿಗಡಾಯಿಸುತ್ತಿದೆ ಎನ್ನಲಾಗಿದೆ. ಡಾ.ಮಹೇಶ್ ಅವರಿಗೆ ಒಂದುವರೆ ವರ್ಷದ ಮಗುವಿದ್ದು, ವೈದ್ಯ ಪತಿಯನ್ನು ಕಳೆದುಕೊಂಡ ಪತ್ನಿ ಆಕ್ರಂದನ ಮುಗಿಲುಮುಟ್ಟಿದೆ.