ಕೋವಿಡ್ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ.
ಇಂಥ ಕೆಲಸಗಳಲ್ಲಿ ಸದಾ ಒಂದು ಹೆಜ್ಜೆ ಮುಂದೆಯೇ ಇರುವ ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಕಂಪನಿಯು ಇದುವರೆಗೂ 32 ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಸಿಬ್ಬಂದಿಗೆ ಮೂರು ಲಕ್ಷಕ್ಕೂ ಹೆಚ್ಚು ಊಟಗಳನ್ನು ಪೂರೈಸಿರುವುದಾಗಿ ತಿಳಿಸಿದೆ.
ಕೊರೋನಾ ಸಂಕಷ್ಟದಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿರುವ ಪುಟ್ಬಾಲ್ ಆಟಗಾರ್ತಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವು
ಟಾಟಾ ಸಮೂಹದ ಕೋವಿಡ್ ಕೇರ್ ಅಭಿಯಾನದ ಅಂಗವಾಗಿ ದೇಶದ ಎಂಟು ನಗರಗಳಲ್ಲಿ ಈ ಸೇವೆ ಒದಗಿಸಲಾಗುತ್ತಿದೆ. ಕೋವಿಡ್ ಎರಡನೇ ಅಲೆ ಜೋರಾಗಿ ಜನರಿಗೆ ಸಂಕಷ್ಟದ ದಿನಗಳು ಮತ್ತೊಮ್ಮೆ ಎದುರಾಗಿರುವ ನಡುವೆ, ಮೇ 2ರಿಂದ ತನ್ನ #MealsToSmiles ಅಭಿಯಾನವನ್ನು ಮತ್ತೊಮ್ಮೆ ಆರಂಭಿಸಿರುವುದಾಗಿ ಸಂಸ್ಥೆ ತಿಳಿಸಿದೆ.
ಕೋವಿಡ್ ಲಸಿಕೆ ಪಡೆದವರಿಗೆ ಸಿಹಿ ಸುದ್ದಿ: ಇಲ್ಲಿದೆ ಮುಖ್ಯ ಮಾಹಿತಿ
ಮುಂಬಯಿ, ಅಹಮದಾಬಾದ್, ದೆಹಲಿ, ಬೆಂಗಳೂರು, ಗೋವಾ, ಹೈದರಾಬಾದ್, ಕೋಲ್ಕತ್ತಾ ಹಾಗೂ ವಾರಣಾಸಿಗಳಲ್ಲಿ ಟಾಟಾ ಸಮೂಹದ ಈ ಸಂಸ್ಥೆ ಭೋಜನ ವ್ಯವಸ್ಥೆಯ ಕೆಲಸ ಮಾಡುತ್ತಿದೆ.