ಬೆಂಗಳೂರು: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಅನಗತ್ಯವಾಗಿ ಓಡಾಟ ನಡೆಸದಂತೆ ಜನರಿಗೆ ಸರ್ಕಾರ, ಪೊಲೀಸರು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಆದರೂ ಇದಾವುದನ್ನೂ ಲೆಕ್ಕಿಸದ ಜನರು ಅದರಲ್ಲೂ ಯುವ ಜನತೆ ಬೇಕಾಬಿಟ್ಟಿಯಾಗಿ ಓಡಾಡುತ್ತಾ ಕಾಲಕಳೆಯುತ್ತಿದ್ದಾರೆ. ಹೀಗೆ ಬೇಜವಾಬ್ದಾರಿ ಮೆರೆದ ಯುವಕರಿಗೆ ಪೊಲೀಸರು ಮಂಗಳಾರತಿ ಮಾಡಿ ವಿಶೇಷ ರೀತಿಯಲ್ಲಿ ಸನ್ಮಾನಿಸಿರುವ ಘಟನೆ ನಡೆದಿದೆ.
ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಬೇಡಿ, ಜಾಗೃತಿ ವಹಿಸಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಲಾಠಿ ಬೀಸಿದರೆ ಹಲವರು ವಿರೋಧಿಸುತ್ತಾರೆ……ಬುದ್ಧಿವಾದಕ್ಕೆ ಜನ ಬಗ್ಗುತ್ತಿಲ್ಲ……ಇದರಿಂದ ರೋಸಿ ಹೋದ ಬೆಂಗಳೂರು ಪೊಲೀಸರು, ಬೇಕಾಬಿಟ್ಟಿ ಓಡಾಡುತ್ತಿದ್ದ ಯುವಕರನ್ನು ಹಿಡಿದು ಹಾರ ಹಾಕಿ, ತಿಲಕವಿಟ್ಟು, ಆರತಿ ಬೆಳಗಿ ಸನ್ಮಾನಿಸಿದ್ದಾರೆ. ಈ ಮೂಲಕ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಹೊಸ ರೀತಿಯಲ್ಲಿ ಜನರಿಗೆ ಬಿಸಿಮುಟ್ಟಿಸಿದ್ದಾರೆ.
ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: 3200 ಪುರುಷ, ಮಹಿಳಾ ಪೊಲೀಸ್ ಹುದ್ದೆಗಳ ನೇಮಕಾತಿಗೆ ಅರ್ಜಿ
ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಿ ಕುಂಟು ನೆಪಹೇಳುತ್ತಿದ್ದ ಯುವಕರನ್ನು ತಡೆದು ಮಂಗಳಾರತಿ ಮಾಡಿದ್ದಾರೆ. ಕೊರೊನಾ ಬಗ್ಗೆ ಜಾಗೃತರಾಗಿ, ಲಾಕ್ ಡೌನ್ ನಿಯಮ ಪಾಲಿಸಿ……ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಬುದ್ಧಿ ಹೇಳಿದ್ದಾರೆ.