ಬಾಗಲಕೋಟೆ: ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆಯಾಗಿರುತ್ತದೆ ಎಂಬುದು ಬಾಗಲಕೋಟೆಯಲ್ಲಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ.
ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದವರ ಮಾಹಿತಿ ಸಂಗ್ರಹಿಸಿ ಬಾಗಲಕೋಟೆ ಸಿಟಿ ಸ್ಕ್ಯಾನ್ ಸೆಂಟರ್ ತಜ್ಞರು ಅಧ್ಯಯನ ನಡೆಸಿದ್ದಾರೆ. ಸುಧೀಂದ್ರ, ಅಖಿಲ್ ಅವರ ಅಧ್ಯಯನದಲ್ಲಿ ಲಸಿಕೆ ಪಡೆದವರಿಗೆ ಸೋಂಕು ತಗಲುವ ಪ್ರಮಾಣ ಕಡಿಮೆಯಾಗಿರುತ್ತದೆ ಎನ್ನುವುದು ಗೊತ್ತಾಗಿದೆ.
1158 ಜನರ ಸಿಟಿ ಸ್ಕ್ಯಾನ್ ಮಾಡಲಾಗಿದ್ದು, ಕೋವಿಡ್ ಲಸಿಕೆ ಪಡೆಯದ 806 ಜನರಿಗೆ(ಶೇಕಡ 69.5 ರಷ್ಟು) ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೊದಲನೇ ಡೋಸ್ ಪಡೆದುಕೊಂಡ 294 ಜನರಿಗೆ ಸೋಂಕು ತಗಲಿದ್ದು, ಎರಡು ಡೋಸ್ ಲಸಿಕೆ ಪಡೆದವರಲ್ಲಿ ಶೇಕಡ 5 ರಷ್ಟು ಜನರಿಗೆ ಮಾತ್ರ ಸೋಂಕು ತಗಲಿದೆ. 2 ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಲಂಗ್ಸ್ ಡ್ಯಾಮೇಜ್ ಆಗುವುದು ತೀರ ಕಡಿಮೆ ಇರುವುದು ಕಂಡುಬಂದಿದೆ. ಲಸಿಕೆ ಪಡೆದವರಲ್ಲಿ ಅನೇಕರಿಗೆ ಸಾವು ಸಂಭವಿಸಿಲ್ಲ. ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.