ಗುವಾಹಟಿ: ಭದ್ರತಾ ಪಡೆಗಳು ಅಸ್ಸಾಂನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6 ಡಿಎನ್ ಎಲ್ ಎ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ(DNLA) ಗುಂಪಿನ ಉಗ್ರರು ಅಸ್ಸಾಂ ನ ಕಾರ್ಬಿ ಆಂಗ್ಲಾಂಗ್, ಹಸಾವೊ ಜಿಲ್ಲೆಗಳಲ್ಲಿ ಮತ್ತು ನೆರೆಯ ನಾಗಾಲ್ಯಾಂಡ್ ನ ಕೆಲ ಭಾಗಗಳಲ್ಲಿ ಸಕ್ರಿಯರಾಗಿದ್ದರು.
ಆಕ್ಸಿಜನ್ ದುರಂತ ಪ್ರಕರಣ; ಸಾವಿನಲ್ಲೂ ತಾರತಮ್ಯ ಮೆರೆದ ರಾಜ್ಯ ಸರ್ಕಾರ; ಆರ್. ಧ್ರುವನಾರಾಯಣ್ ಆಕ್ರೋಶ
ಈ ಹಿನ್ನೆಲೆಯಲ್ಲಿ ತಡರಾತ್ರಿಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಇದೀಗ 6 ಉಗ್ರರನ್ನು ಹತ್ಯೆಗೈದಿದೆ. ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ವಿಶೇಷ ಡಿಜಿ ಜಿಪಿ ಸಿಂಗ್ ಮಾಹಿತಿ ನೀಡಿದ್ದಾರೆ.