ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕಿ ಸೋನಾಲಿ ಗುಹಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದು, ಪಕ್ಷ ತೊರೆದಿದ್ದಕ್ಕೆ ಕ್ಷಮೆ ಕೋರಿ, ತಮ್ಮನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
“ನಾನು ಈ ಪತ್ರವನ್ನು ಮುರಿದ ಹೃದಯದಲ್ಲಿ ಬರೆಯುತ್ತಿದ್ದು, ಭಾವನೆಗೆ ಒಳಗಾಗಿ ತಪ್ಪಾದ ಪಕ್ಷವೊಂದಕ್ಕೆ ಸೇರುವ ತಪ್ಪು ನಿರ್ಧಾರ ತೆಗೆದುಕೊಂಡಿದ್ದೆ. ನಾನು ಅಲ್ಲಿ ಹೊಂದಿಕೊಳ್ಳಲು ಆಗಲಿಲ್ಲ” ಎಂದು ಗುಹಾ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಲಾಕ್ ಡೌನ್ ಹೊತ್ತಲ್ಲಿ ಆನ್ಲೈನ್ ಮೂಲಕ ವಸ್ತುಗಳನ್ನು ತರಿಸಿಕೊಳ್ಳುವವರಿಗೆ ‘ಬಿಗ್ ಶಾಕ್’
“ನೀರನ್ನು ಬಿಟ್ಟು ಮೀನು ಹೇಗೆ ಬದುಕಲಾರದೂ, ನಾನೂ ಸಹ ನಿಮ್ಮನ್ನ ಬಿಟ್ಟು ಬಾಳಲಾರೆ, ’ದೀದಿ’. ನಾನು ನಿಮ್ಮ ಕ್ಷಮೆ ಕೋರುತ್ತೇನೆ ಹಾಗೂ ಒಂದು ವೇಳೆ ನೀವು ನನ್ನ ಕ್ಷಮಿಸದೇ ಇದ್ದಲ್ಲಿ, ನನಗೆ ಬದುಕಲು ಕಷ್ಟವಾಗುತ್ತದೆ. ದಯವಿಟ್ಟು ನನ್ನನ್ನು ಮರಳಲು ಅವಕಾಶ ನೀಡಿ ಹಾಗೂ ನನ್ನ ಉಳಿದ ಜೀವನವನ್ನು ನಿಮ್ಮ ಪ್ರೀತಿಯ ಆರೈಕೆಯಲ್ಲಿ ಇರಲು ಬಯಸುತ್ತೇನೆ” ಎಂದು ಗುಹಾ ಬರೆದುಕೊಂಡಿದ್ದಾರೆ.
ದೀದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುಹಾ, ವಿಧಾನ ಸಭಾ ಚುನಾವಣೆ ಸನಿಹವಾಗುತ್ತಲೇ ಪಕ್ಷ ತೊರೆದು ಬಿಜೆಪಿ ಸೇರಿದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು.