ಯುನೈಟೆಡ್ ಕಿಂಗ್ಡಂನ ನಾಟಿಂಗ್ಹ್ಯಾಮ್ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ ಅಂದ್ರೆ ಸುಮಾರು 17,76,282 ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಟಿವಿಯನ್ನು ದ್ವೇಷಿಸುವ ವ್ಯಕ್ತಿ ಮನೆಯನ್ನು ಅಕ್ವೇರಿಯಂ ಮಾಡಿಕೊಂಡಿದ್ದಾನೆ.
ವರದಿಯ ಪ್ರಕಾರ, ಮನೆಯನ್ನು ಫಿಶ್ ಅಕ್ವೇರಿಯಂ ಮಾಡಿಕೊಂಡ ವ್ಯಕ್ತಿಯ ಹೆಸರನ್ನು ಜ್ಯಾಕ್. ಇದಕ್ಕಾಗಿ 9 ದೊಡ್ಡ ಟ್ಯಾಂಕ್ ನಿರ್ಮಿಸಿದ್ದಾನೆ. ಈ ಟ್ಯಾಂಕ್ ಗಳ ಆಳ 7 ಅಡಿ. ಜ್ಯಾಕ್ ಮೀನುಗಳ ನಡುವೆ ವಾಸಿಸಲು ಇಷ್ಟಪಡುತ್ತಾನೆ. ಮನೆಯ ಅಕ್ವೇರಿಯಂನಲ್ಲಿ ಸುಮಾರು 400 ಮೀನುಗಳಿವೆ.
ಟಿವಿ ಅಥವಾ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಚಲನಚಿತ್ರಗಳು ಅಥವಾ ವೆಬ್ ಸೀರಿಸ್ಗಳನ್ನು ವೀಕ್ಷಿಸಲು ಜ್ಯಾಕ್ಗೆ ಇಷ್ಟವಿಲ್ಲ. ಅದರಿಂದ ಸಮಯ ವ್ಯರ್ಥ ಎನ್ನುವ ಆತ ಮೀನುಗಳನ್ನು ಅತಿಯಾಗಿ ಪ್ರೀತಿಸುತ್ತಾನೆ. 10ನೇ ವಯಸ್ಸಿನಲ್ಲಿಯೇ ಜ್ಯಾಕ್, ಮೀನುಗಳನ್ನು ಇಷ್ಟಪಡಲು ಶುರು ಮಾಡಿದ್ದ. ಜ್ಯಾಕ್ ಮನೆಯಲ್ಲಿ ತಯಾರಿಸಿದ ಮೀನಿನ ಟ್ಯಾಂಕ್ನಲ್ಲಿ 4,800 ಗ್ಯಾಲನ್ ನೀರು ಬರುತ್ತದೆ. ಮೀನುಗಳು ಇಲ್ಲಿ ಬಹಳ ಆರಾಮವಾಗಿ ವಾಸಿಸುತ್ತವೆ.