ನವದೆಹಲಿ: ಕೇಂದ್ರ ಸರ್ಕಾರದ 1.50 ಕೋಟಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗಿಗಳ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರದ ಕಾರ್ಯಕ್ಷೇತ್ರಕ್ಕೆ ಒಳಪಡುವ ನೌಕರರ ತುಟ್ಟಿಭತ್ಯೆಯನ್ನು 105 ರಿಂದ 200 ರೂ. ರವರೆಗೆ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸರ್ಕಾರದ ಅಧೀನದ ರೈಲ್ವೇ, ಗಣಿ, ಬಂದರು, ಕಾರ್ಪೊರೇಷನ್ ನೌಕರ ವರ್ಗಕ್ಕೆ ಈ ಪರಿಷ್ಕೃತ ಡಿಎ ಅನ್ವಯಿಸಲಿದ್ದು, ಗುತ್ತಿಗೆ ಮತ್ತು ಹಂಗಾಮಿ ನೌಕರರಿಗೂ ಸೌಲಭ್ಯ ಸಿಗುತ್ತದೆ ಎಂದು ಹೇಳಲಾಗಿದೆ.