ಕೊರೊನಾ ನಮ್ಮನ್ನು ಬಿಡುವಂತೆ ಕಾಣ್ತಿಲ್ಲ. ಒಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾದಿಂದ ಗುಣಮುಖರಾದವರಿಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತಿದೆ. ಇದಲ್ಲದೆ ಸಂಶೋಧನೆಯೊಂದು ಇನ್ನೊಂದು ಸಂಗತಿಯನ್ನು ಹೊರ ಹಾಕಿದೆ. ಕೊರೊನಾದಿಂದ ಚೇತರಿಸಿಕೊಂಡ ಪುರುಷರಿಗೆ ನಪುಂಸಕತೆ ಕಾಡುವ ಅಪಾಯವಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ವೈರಸ್, ಪುರುಷರ ಖಾಸಗಿ ಅಂಗದ ಮೇಲೆ ಪ್ರಭಾವ ಬೀರಲಿದೆ. ಇದು ನಪುಂಸಕತೆಗೆ ಕಾರಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ ಕೊರೊನಾ ಲಸಿಕೆ ನಪುಂಸಕತೆ ಹುಟ್ಟಿ ಹಾಕಲಿದೆ ಎನ್ನಲಾಗಿತ್ತು. ಆದ್ರೆ ವೈದ್ಯರು ಇದು ಸುಳ್ಳು ಎಂಬ ಮಾಹಿತಿ ನೀಡಿದ್ದರು.
ಮಿಯಾಮಿ ವಿಶ್ವವಿದ್ಯಾಲಯದ ಸಂಶೋಧಕರು, ಕೊರೊನಾ ವೈರಸ್ ಸೋಂಕಿತ ಪುರುಷರ ಅಂಗಾಂಶಗಳು ಮತ್ತು ಸೋಂಕಿಗೆ ಒಳಗಾಗದವರ ಅಂಗಾಂಶಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಸಂಶೋಧನೆಯ ಪ್ರಕಾರ, ಕೊರೊನಾ ವೈರಸ್ ದೇಹದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ದೇಹದ ಅನೇಕ ಭಾಗಗಳಲ್ಲಿ ರಕ್ತ ಪೂರೈಕೆಗೆ ಅಡ್ಡಿಯಾಗುತ್ತದೆ. ಇವುಗಳಲ್ಲಿ ಪುರುಷರ ಖಾಸಗಿ ಭಾಗವೂ ಸೇರಿದೆ. ರಕ್ತದ ಹರಿವು ಕಡಿಮೆಯಾಗುವುದರಿಂದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯುಂಟಾಗುತ್ತದೆ.