alex Certify ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್​ – ಪ್ಯಾಲೆಸ್ತಿನ್​​ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್‌ ನಲ್ಲಿ ಘರ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್​ – ಪ್ಯಾಲೆಸ್ತಿನ್​​ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್‌ ನಲ್ಲಿ ಘರ್ಷಣೆ

ನ್ಯೂಯಾರ್ಕ್​ ಸಿಟಿ ಟೈಮ್ಸ್​ ಸ್ಕ್ವೇರ್​​ನಲ್ಲಿ ಗುರುವಾರದಂದು ಇಸ್ರೇಲಿಯನ್​ ಪರ ಪ್ರತಿಭಟನಾಕಾರರು ಹಾಗೂ ಪ್ಯಾಲೆಸ್ಟಿನಿಯನ್​ ಪರ ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ.

ಇಸ್ರೇಲ್​ ಹಾಗೂ ಪ್ಯಾಲೆಸ್ತೀನ್​ ದೇಶಗಳ ವಿವಾದಿತ ಸ್ಥಳವಾದ ಗಾಜಾ ಸ್ಟ್ರಿಪ್​​ನಲ್ಲಿ ಕಳೆದ 11 ದಿನಗಳಿಂದ ಸಂಭವಿಸುತ್ತಿದ್ದ ಘರ್ಷಣೆಗೆ ಕದನ ವಿರಾಮ ಘೋಷಿಸಲಾಗಿದೆ. ಈ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಹಿಂಸಾಚಾರ ಸಂಭವಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಿಡ್​ಟೌನ್​ ಮ್ಯಾನ್​ಹ್ಯಾಟನ್​ ಪಾದಚಾರಿ ರಸ್ತೆಯಲ್ಲಿ ಒಂದು ಸ್ಫೋಟಕ ಸಾಧನವನ್ನ ಎಸೆದ್ದಿದ್ದನ್ನ ಕಾಣಬಹುದಾಗಿದೆ. ಕಾರಿನಿಂದ ಈ ಸ್ಫೋಟಕಗಳನ್ನ ಎಸೆಯಲಾಗಿದ್ದು ಓರ್ವ ವ್ಯಕ್ತಿಗೆ ಚಿಕ್ಕ ಪುಟ್ಟ ಗಾಯಗಳಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.

ಗಾಜಾದಲ್ಲಿ ಕಳೆದ 11 ದಿನಗಳಿಂದ ಇಸ್ರೇಲ್​ ಹಾಗೂ ಪ್ಯಾಲೆಸ್ತೀನ್​ ದೇಶದ ನಡುವೆ ಸಂಘರ್ಷ ನಡೆಯುತ್ತಿತ್ತು. ಆದರೆ ಇಸ್ರೇಲ್​ ಹಾಗೂ ಹಮಾಸ್​ ಟೆರರಿಸ್ಟ್​ ಗ್ರೂಪ್​ ನಡುವೆ ತಾತ್ಕಾಲಿಕ ಕದನ ವಿರಾಮವನ್ನ ಘೋಷಣೆ ಮಾಡಲಾಯ್ತು. ಇದು ಇಸ್ರೇಲ್​ನ ಸೋಲು ಎಂದು ಪ್ಯಾಲೆಸ್ತಿನ್​ ಬೆಂಬಲಿತ ಉಗ್ರ ಸಂಘಟನೆ ಸಂಭ್ರಮಾಚರಣೆ ಮಾಡಿದೆ. ಇದಾದ ಬಳಿಕ ಈ ಹಿಂಸಾಚಾರ ಸಂಭವಿಸಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...