ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾದಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಅನಿವಾರ್ಯವಾಗಿದೆ. ಆದ್ರೆ ಸರ್ಕಾರ ಎಷ್ಟು ಜಾಗೃತಿ ಕ್ರಮಗಳನ್ನು ಕೈಗೊಂಡರೂ ಜನರು ನಿಯಮ ಪಾಲನೆ ಮಾಡ್ತಿಲ್ಲ ಎಂಬ ಸಂಗತಿ ಗೊತ್ತಾಗಿದೆ.
ಕೊರೊನಾ ವೈರಸ್ ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ವರದಿಯನ್ನು ಬಿಡುಗಡೆ ಮಾಡಿದೆ. ಅಪಾಯದ ಹೊರತಾಗಿಯೂ ದೇಶಾದ್ಯಂತ ಶೇಕಡಾ 50 ರಷ್ಟು ಜನರು ಮಾಸ್ಕ್ ಧರಿಸುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಅದ್ರಲ್ಲೂ ಬಹುತೇಕರು ಸರಿಯಾಗಿ ಮಾಸ್ಕ್ ಧರಿಸುವುದಿಲ್ಲವೆಂದು ಆರೋಗ್ಯ ಸಚಿವಾಲಯ ಹೇಳಿದೆ. ಕೆಲವರು ಮೂಗಿನ ಕೆಳಗೆ ಮಾಸ್ಕ್ ಹಾಕಿದ್ರೆ ಮತ್ತೆ ಕೆಲವರು ಬಾಯಿ ಕೆಳಗೆ ಮಾಸ್ಕ್ ಹಾಕುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ.
ದೇಶದಲ್ಲಿ ಶೇಕಡಾ 50ರಷ್ಟು ಜನರು ಮಾಸ್ಕ್ ಧರಿಸುತ್ತಾರೆ. ಶೇಕಡಾ 64ರಷ್ಟು ಮಂದಿ ಮೂಗಿಗೆ ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಶೇಕಡಾ 20ರಷ್ಟು ಮಂದಿ ಗಲ್ಲದ ಕೆಳಗೆ ಮಾಸ್ಕ್ ಧರಿಸುತ್ತಾರೆ. ಶೇಕಡಾ 2ರಷ್ಟು ಮಂದಿ ಕತ್ತಿಗೆ ಹಾಕಿಕೊಳ್ತಾರೆ. ಶೇಕಡಾ 14ರಷ್ಟು ಮಂದಿ ಸರಿಯಾಗಿ ಮಾಸ್ಕ್ ಧರಿಸುವುದಿಲ್ಲ. ಅಂದ್ರೆ ದೇಶದಲ್ಲಿ ಶೇಕಡಾ 7 ಮಂದಿ ಮಾತ್ರ ಮಾಸ್ಕ್ ಧರಿಸುತ್ತಾರೆಂದು ವರದಿಯಲ್ಲಿ ಹೇಳಲಾಗಿದೆ.