ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿ ಸರ್ಕಾರ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಮನೆಯಲ್ಲೇ ಕುಳಿತು 5 ಸಾವಿರ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ.
ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಇದ್ರ ಫೋಟೋವನ್ನು ಸುಂದರ ಶೀರ್ಷಿಕೆ ಜೊತೆ ಅಪ್ಲೋಡ್ ಮಾಡಿದ್ರೆ ಆತನಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. Mygovindia ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯ ನೀವು ಲಸಿಕೆ ಹಾಕಿಸಿಕೊಂಡಿದ್ದರೆ ನೀವು ಲಕ್ಷಾಂತರ ಮಂದಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಲಸಿಕೆ ಹಾಕಿದ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಒಳ್ಳೆ ಟ್ಯಾಗ್ಲೈನ್ ಹಾಕಿದ್ರೆ 5 ಸಾವಿರ ರೂಪಾಯಿ ಗೆಲ್ಲುವ ಅವಕಾಶ ಸಿಗ್ತಿದೆ ಎಂದು ಟ್ವಿಟ್ ಮಾಡಲಾಗಿದೆ.
Mygovindia ನಲ್ಲಿ ಲಿಂಕ್ ಅಪ್ಲೋಡ್ ಮಾಡಲಾಗಿದೆ. ಅದನ್ನು ಓಪನ್ ಮಾಡುವ ಮೂಲಕ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬಹುದು. ಪ್ರತಿ ತಿಂಗಳು 10 ಮಂದಿಗೆ 5 ಸಾವಿರ ರೂಪಾಯಿ ಸಿಗಲಿದೆ. ನಿಮ್ಮ ಮನೆಯ ಸದಸ್ಯರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೆ ಅವ್ರ ಫೋಟೋವನ್ನು ಒಳ್ಳೆ ಶೀರ್ಷಿಕೆ ಜೊತೆ ಹಾಕಿ ಜನರನ್ನು ಪ್ರೇರೇಪಿಸಬಹುದು. ಇದಕ್ಕಾಗಿ ಮೊದಲು https://mygov.in. ಗೆ ಲಾಗಿನ್ ಆಗಬೇಕು. ನಂತ್ರ ಟು ಪಾರ್ಟಿಸಿಪೇಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಹೆಸರು ನೋಂದಾಯಿಸಿಕೊಳ್ಳಬೇಕು.