ಬರೋಬ್ಬರಿ 4320 ಚದರ ಕಿಲೋಮೀಟರ್ ಗಾತ್ರದ ಬೃಹತ್ ಮಂಜುಗಡ್ಡೆಯೊಂದು ಅಂಟಾರ್ಟಿಕಾದಲ್ಲಿ ಮುರಿದು ಬಿದ್ದಿದೆ. ಉಪಗ್ರಹಗಳ ಸಹಾಯದಿಂದ ಈ ಮಂಜುಗಡ್ಡೆಯ ಗಾತ್ರವನ್ನ ಅಳೆಯಲಾಗಿದೆ. ಈ ರೀತಿ ಮುರಿದುಬಿದ್ದ ಈ ಮಂಜುಗಡ್ಡೆಯು ವಿಶ್ವದಲ್ಲೇ ಅತ್ಯಂತ ದೊಡ್ಡದು ಎಂದು ದೃಢೀಕರಿಸಲಾಗಿದೆ.
ಹಿಮ ಬಂಡೆಗಳಿಂದ ಮಂಜುಗಡ್ಡೆಯ ಬೃಹದಾಕಾರದ ತುಂಡುಗಳು ಹಿಮನದಿಯ ಅಂಚಿನಿಂದ ದೂರವಾಗುವ ಪ್ರಕ್ರಿಯೆಯನ್ನ ಐಸ್ ಕ್ಯಾಲ್ವಿಂಗ್ ಅಥವಾ ಐಸ್ಬರ್ಗ್ ಕ್ಯಾಲ್ವಿಂಗ್ ಎಂದು ಕರೆಯಲಾಗುತ್ತದೆ.
ಈ ಬೃಹದಾಕಾರದ ಮಂಜುಗಡ್ಡೆಯು ದೆಹಲಿಗಿಂತ ಮೂರು ಪಟ್ಟು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಸುಮಾರು 170 ಕಿಲೋಮೀಟರ್ ಉದ್ದ ಹಾಗೂ 25 ಕಿಲೋಮೀಟರ್ ಅಗಲವಾಗಿದೆ.
ಕೋಪರ್ನಿಕಸ್ ಸೆಂಟಿನೆಲ್ – 1 ಮಿಷನ್ ಸೆರೆಹಿಡಿದ ಫೋಟೋಗಳಲ್ಲಿ ಈ ಮಂಜುಗಡ್ಡೆಯು ಕಂಡುಬಂದಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಮ್ಮ ವೆಬ್ಸೈಟ್ನಲ್ಲಿ ಫೋಟೋಗಳನ್ನ ಬಿಡುಗಡೆ ಮಾಡಿದೆ.