ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ(ಮೇ 22) ಕೊರೋನಾ ಲಸಿಕೆ ನೀಡಲಾಗುತ್ತದೆ. ಮೊದಲಿಗೆ ಆದ್ಯತಾ ವಲಯದವರಿಗೆ ಲಸಿಕೆ ನೀಡಲಾಗುವುದು.
18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಲಾಗಿದ್ದು, ಅವರಿಗೆ ನಾಳೆಯಿಂದ ಲಸಿಕೆ ನೀಡಲಾಗುವುದು.
ಕಟ್ಟಡ ಕಾರ್ಮಿಕರು, ಟೆಲಿಕಾಂ, ಇಂಟರ್ನೆಟ್ ಸೇವಾದಾರರು, ಅರಣ್ಯ ಇಲಾಖೆ, ಗಾರ್ಮೆಂಟ್ಸ್, ರೈಲ್ವೆ, ರಾಜ್ಯ, ರಾಷ್ಟ್ರ, ಪ್ರತಿನಿಧಿಸುವ ಆಟಗಾರರು, ಸಿಬ್ಬಂದಿ, ಬ್ಯಾಂಕ್, KMF ಸಿಬ್ಬಂದಿ, ವಕೀಲರು, ಚಿತ್ರರಂಗದ ಸಿಬ್ಬಂದಿ, ಚಾಲಕರು, ಹೋಟೆಲ್ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ.
ಅದೇ ರೀತಿ ವಿಕಲಚೇತನರು, ಅವರ ಒಬ್ಬ ಆರೈಕೆದಾರರು, ರುದ್ರಭೂಮಿ ಸಿಬ್ಬಂದಿ, ಕೊರೋನ ಕರ್ತವ್ಯಕ್ಕೆ ನಿಯೋಜಿಸಿದ ಶಿಕ್ಷಕರು, ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಇವರೊಂದಿಗೆ ಕೈದಿಗಳಿಗೂ ಲಸಿಕೆ ನೀಡಲಾಗುವುದು.