ನವದೆಹಲಿ: ದೇಶದಲ್ಲಿ ಮೇ 12 ರಿಂದ 18 ರವರೆಗೆ ಹೆಚ್ಚು ಕೊರೋನಾ ಕೇಸ್ ಗಳು ದಾಖಲಾಗಿವೆ. 430 ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಕೇಸ್ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.
ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಮೇ 12 ರಿಂದ 18 ರವರೆಗೆ ಹೆಚ್ಚು ಕೊರೋನಾ ಕೇಸ್ ಗಳು ದಾಖಲಾಗಿವೆ. 430 ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಕೊರೋನಾ ಕೇಸ್ ದಾಖಲಾಗಿದ್ದು, ಮೂರು ವಾರದಿಂದ ಬೆಳಗಾವಿಯಲ್ಲಿ ಕೇಸ್ ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಈಗಲೂ ಶೇಕಡ 50 ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ. ಶೇಕಡ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವಂತಹ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು. ಮೇ 13 ರಿಂದ 19 ರ ವರೆಗೆ ದೇಶದಲ್ಲಿ ಶೇಕಡ 15 ರಷ್ಟು ಪಾಸಿಟಿವಿಟಿ ದರ ಇತ್ತು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಈಗ ಕೊರೋನಾಕ್ಕೆ ಕಡಿಮೆಯಾಗುತ್ತಿದೆ. ಕರ್ನಾಟಕದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇಕಡ 29.9 ರಷ್ಟು ಇದ್ದು, ಕರ್ನಾಟಕಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದ್ದಾರೆ.