ಪಾಟ್ನಾ: ಕೊರೊನಾ ಅಟ್ಟಹಾಸ, ಬ್ಲ್ಯಾಕ್ ಫಂಗಸ್ ನಿಂದ ತತ್ತರಿಸಿರುವ ಭಾರತಕ್ಕೆ ಮತ್ತೊಂದು ಮಹಾಮಾರಿ ಅಪ್ಪಳಿಸಿದ್ದು, ವೈಟ್ ಫಂಗಸ್ ಎಂಬ ಅಪಾಯಕಾರಿ ಹೊಸ ಸೋಂಕು ಪತ್ತೆಯಾಗಿದೆ.
ಬ್ಲ್ಯಾಕ್ ಫಂಗಸ್ ಗಿಂತಲೂ ಅಪಾಯಕಾರಿಯಾಗಿರುವ ವೈಟ್ ಫಂಗಸ್ ಎಂಬ ಶಿಲೀಂದ್ರ ಸೋಂಕು ಕೊರೊನಾ ಸೋಂಕಿತರಲ್ಲಿ ಕಂಡುಬಂದಿದ್ದು, ಬಿಹಾರದ ಪಾಟ್ನಾದಲ್ಲಿ ನಾಲ್ವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಈ ನಾಲ್ವರು ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಕ್ಸಿಜನ್ ಹಾಗೂ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಾಗಿದ್ದಾರೆ. HR ಸಿಟಿ ಸ್ಕ್ಯಾನ್ ಮಾಡಿಸಿದಾಗ ಇವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ.
ವೈಟ್ ಫಂಗಸ್ ಲಂಗ್ಸ್, ಚರ್ಮ, ಕಿಡ್ನಿ, ಬ್ರೇನ್, ಬಾಯಿ ಹಾಗೂ ದೇಹದ ಇತರ ಅಂಗಾಂಗಗಳ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಬ್ಲ್ಯಾಕ್ ಫಂಗಸ್ ನಂತೆಯೇ ಮಧುಮೇಹಿಗಳಲ್ಲಿ, ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ವೈಟ್ ಫಂಗಸ್ ಕೂಡ ಪತ್ತೆಯಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.