ಕಳೆದ ವಾರವಷ್ಟೇ ಬಿಹಾರ ಸಿಎಂ ನಿತೀಶ್ ಕುಮಾರ್ ರಾಜ್ಯದಲ್ಲಿ ಲಾಕ್ಡೌನ್ ಅವಧಿಯನ್ನ ಮೇ 25ರವರೆಗೆ ವಿಸ್ತರಣೆ ಮಾಡೋದಾಗಿ ಹೇಳಿದ್ದರು.
ಈ ವೇಳೆಯಲ್ಲಿ ಬಿಹಾರ ಸಿಎಂಗೆ ಯುವಕನೊಬ್ಬ ವಿಚಿತ್ರ ಕಾರಣಕ್ಕೆ ಲಾಕ್ಡೌನ್ ಅವಧಿಯಲ್ಲಿ ಮದುವೆ ಕಾರ್ಯಕ್ರಮಗಳನ್ನ ಬ್ಯಾನ್ ಮಾಡಿ ಎಂದು ಮನವಿ ಮಾಡಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಮಾಡಿದ್ದ ಲಾಕ್ಡೌನ್ ವಿಸ್ತರಣೆ ಟ್ವೀಟ್ಗೆ ಪ್ರತಿಕ್ರಿಯಿಸಿದ ಪಂಕಜ್ ಕುಮಾರ್ ಗುಪ್ತಾ, ಸರ್ ದಯಮಾಡಿ ನೀವು ಮದುವೆಗಳನ್ನ ಬ್ಯಾನ್ ಮಾಡಿ. ಈ ರೀತಿ ಮಾಡಿದ್ರೆ ಮೇ 19ರಂದು ನಿಗದಿಯಾಗಿದ್ದ ನನ್ನ ಗರ್ಲ್ಫ್ರೆಂಡ್ ಮದುವೆ ಕೂಡ ಪೋಸ್ಟ್ ಪೋನ್ ಆಗುತ್ತೆ. ಈ ರೀತಿ ಮಾಡಿದ್ರೆ ನಾನು ನಿಮಗೆ ಜೀವನ ಪೂರ್ತಿ ಕೃತಜ್ಞನಾಗಿರುತ್ತೇನೆ ಎಂದು ಬರೆದಿದ್ದಾನೆ.
ಪಂಕಜ್ರ ಈ ವಿಚಿತ್ರ ಮನವಿ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದಕ್ಕೆ ನವ್ಯಾ ಕುಮಾರಿ ಎಂಬವರು ಪ್ರತಿಕ್ರಿಯಿಸಿದ್ದು ಈ ಟ್ವೀಟ್ ಇನ್ನಷ್ಟು ಮಜವಾಗಿದೆ.
ನೀನು ನನ್ನ ಬಿಟ್ಟು ಪೂಜಾಳ ಹಿಂದೆ ಹೋದೆ. ಆ ಸಮಯದಲ್ಲಿ ನಾನು ತುಂಬಾನೇ ಅಳುತ್ತಿದ್ದೆ ಪಂಕಜ್. ನಾನೀಗ ಖುಷಿಯಲ್ಲಿ ಮದುವೆಯಾಗುತ್ತಿದ್ದೇನೆ. ಹೀಗಾಗಿ ನೀನು ಕೂಡ ಈ ರೀತಿ ಮನವಿ ಮಾಡಬೇಕು. ಆದರೆ ಪಂಕಜ್, ನೀನು ಬೇರೆಯವರನ್ನ ಮದುವೆಯಾದರೂ ಸಹ ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತೀಯಾ. ದಯಮಾಡಿ ನನ್ನ ಮದುವೆಗೆ ಬಾ ಎಂದು ರಿಪ್ಲೈ ಮಾಡಿದ್ದಾಳೆ.
ಈ ವೇಳೆ ಅನೇಕರು ಪಂಕಜ್ ಜೊತೆ ಇರಿ ಎಂದು ನವ್ಯಾ ಬಳಿ ಮನವಿ ಮಾಡಿದ್ರೆ ಇನ್ನೂ ಕೆಲವರು ನೀವು ಈ ರೀತಿ ವೈಯಕ್ತಿಕ ಜೀವನವನ್ನ ಸಾರ್ವಜನಿಕವಾಗಿ ಹೇಳಿಕೊಂಡರೆ ನಿಮ್ಮ ಮದುವೆ ಮೇಲೆ ಪ್ರಬಾವ ಬೀರಬಹುದು ಎಂದು ಹೇಳಿದ್ದಾರೆ.
ಆದರೆ ಕತೆ ಇಲ್ಲಿಗೆ ಮುಗಿಯಲಿಲ್ಲ. ಪಂಕಜ್, ನವ್ಯಾಗೆ ನೀವು ಯಾರೆಂದು ತಿಳಿಯಲಿಲ್ಲ ಸಹೋದರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಗುಲಾಬಿಯ ಹುಡುಕಾಟದಲ್ಲಿ ನೀವು ಗುಲಾಬ್ ಜಾಮೂನ್ನ್ನು ಕಳೆದುಕೊಂಡೆ ಪಂಕಜ್ ಎಂದು ನವ್ಯಾ ಉತ್ತರ ನೀಡಿದ್ದಾರೆ. ಈ ಪಂಕಜ್ – ನವ್ಯಾ ಸಂಭಾಷಣೆ ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿದೆ.