ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಅಮೆರಿಕಾದಲ್ಲಿ 56 ತಿಂಗಳ ಜೈಲು ಶಿಕ್ಷೆಯಾಗಿದೆ. ಶಿಕ್ಷೆ ಪೂರ್ಣಗೊಂಡ ಮೇಲೆ ಆತನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು. ಆತನಿಗೆ ಅಮೆರಿಕಾದಲ್ಲಿರುವ ಹಕ್ಕಿಲ್ಲವೆಂದು ಕೋರ್ಟ್ ಹೇಳಿದೆ. 32 ವರ್ಷದ ಸುನಿಲ್ ಕೆ ಅಕುಲ್ ಗೆ ಟೆಕ್ಸಾಸ್ ಮೂಲದ ನ್ಯಾಯಾಲಯವು ಶಿಕ್ಷೆ ನೀಡಿದೆ.
ಹೆಂಡತಿಗೆ ಹಿಂಸೆ, ಅಪಹರಣ ಮತ್ತು ಹಿಂಬಾಲಿಸಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ. ಫೆಡರಲ್ ನ್ಯಾಯಾಲಯವು ಸುನಿಲ್ ಗೆ 56 ತಿಂಗಳ ಶಿಕ್ಷೆಯೊಂದಿಗೆ ಮೂರು ವರ್ಷಗಳ ಕಾಲ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿಡಲು ಆದೇಶಿಸಿದೆ. ಘಟನೆ ಆಗಸ್ಟ್ 6,2017 ರಲ್ಲಿ ನಡೆದಿತ್ತು. ಅಕುಲ್ ಹಾಗೂ ಪತ್ನಿ ಬೇರೆ ವಾಸ ಮಾಡ್ತಿದ್ದಾರೆ. ಪತ್ನಿ ಮನೆಗೆ ಹೋಗಿ ಆಕೆಯನ್ನು ಬಲವಂತವಾಗಿ ಹೊರಗೆ ಕರೆತಂದು ಕಾರಿನಲ್ಲಿ ಕರೆದೊಯ್ದ ಅಕುಲ್, ಟೆಕ್ಸಾಸ್ ಗೆ ಬಿಡುವುದಾಗಿ ಹೇಳಿ ಅನೇಕ ಕಡೆ ಓಡಾಡಿಸಿದ್ದ.
ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ದೂರು
ಕೆಲಸ ಬಿಡುವಂತೆ ಪತ್ನಿಗೆ ಒತ್ತಡ ಹಾಕಿದ್ದ ಅಕುಲ್, ಲ್ಯಾಪ್ ಟಾಪ್ ಒಡೆದು ಹಾಕಿದ್ದ. ಹೆಂಡತಿಯನ್ನು ಹೊಡೆದು ಕಾರಿನಿಂದ ಹೊರಗೆ ತಳ್ಳಿದ್ದ. ನಂತ್ರ ಹೊಟೇಲ್ ಗೆ ಕರೆದೊಯ್ದ ಅಕುಲ್, ಅಲ್ಲಿಯೂ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದ.