ಪೊಲೀಸ್ ಅಧಿಕಾರಿ ಹಾಗೂ ಜಾನಪದ ಗಾಯಕ ಮತಿಚಿಯಮ್ ಬಾಲಾ ಎಂಬ ಹೆಸರಿನ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್-19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿಜಯ್ ಸೇತುಪತಿರ ಧರ್ಮ ದುರಾಯ್‌ನಲ್ಲಿ ಮಕ್ಕ ಕಳಂಗುತ್ತಪ್ಪ ಹಾಡನ್ನು ಹಾಡುವ ಮೂಲಕ ಬಾಲಾ ಸುದ್ದಿ ಮಾಡಿದ್ದರು.
ಲಾಕ್‌ಡೌನ್ ನಿಯಮಾವಳಿ ಉಲ್ಲಂಘನೆ ಮಾಡುವ ಮಂದಿಯನ್ನು ತಡೆಯುವ ಬಾಲಾ, ಅವರಿಗಾಗಿ ತಮ್ಮ ವಿಶೇಷ ಹಾಡನ್ನು ಹಾಡುವ ಮೂಲಕ ಕೋವಿಡ್-19 ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ತಂತಮ್ಮ ಮನೆಗಳಲ್ಲೇ ಉಳಿಯಿರಿ ಎಂದು ತಮ್ಮ ಹಾಡಿನ ಮೂಲಕ ಮನವಿ ಮಾಡಿಕೊಳ್ಳುವ ಬಾಲಾ ದೇಶಾದ್ಯಂತ ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ಮನೆಯಲ್ಲೇ ಕುಳಿತು ಒಂದೇ ಬಾರಿ ಗಳಿಸಿ 45 ಸಾವಿರ ರೂ….!
ಸುಖಾಸುಮ್ಮನೇ ಯಾವ್ಯಾವುದೋ ಕಾರಣಗಳಿಗೆಲ್ಲಾ ಸರತಿಯಲ್ಲಿ ನಿಲ್ಲುತ್ತಿದ್ದ ಜನರೀಗ ತಮ್ಮ ಪ್ರೀತಿಪಾತ್ರರ ಅಂತ್ಯಸಂಸ್ಕಾರಕ್ಕೆಂದು ನಿಲ್ಲುವಂತಾಗಿದೆ. ಇದು ಬಹಳ ಕ್ರೂರ ಪರಿಸ್ಥಿತಿಯಾಗಿದೆ ಎಂದಿರುವ ಬಾಲಾ, “ದಯವಿಟ್ಟು ಹೆದರಬೇಡಿ. ಮೊದಲು ಲಸಿಕೆ ಹಾಕಿಸಿಕೊಂಡು ಮನೆಗಳಲ್ಲಿ ಸುರಕ್ಷಿತವಾಗಿರಿ” ಎಂದು ಮನವಿ ಮಾಡಿಕೊಂಡಿದ್ದಾರೆ.