ನವದೆಹಲಿ: ಕೊರೋನಾ ಚಿಕಿತ್ಸೆಗೆ ರೆಮ್ ಡೆಸಿವಿರ್ ಪರಿಣಾಮಕಾರಿಯಲ್ಲ, ಅದು ಪರಿಣಾಮಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಕೋವಿಡ್ ರೋಗಿಗಳಿಗೆ ರೆಮ್ ಡೆಸಿವಿರ್ ನೀಡುವುದನ್ನು ಶೀಘ್ರದಲ್ಲೇ ಕೈಬಿಡಬಹುದು ಎಂದು ದೆಹಲಿ ಗಂಗಾರಾಮ್ ಆಸ್ಪತ್ರೆ ಅಧ್ಯಕ್ಷ ಡಾ.ಡಿ.ಎಸ್. ರಾಣಾ ಹೇಳಿದ್ದಾರೆ.
ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ರೆಮ್ ಡೆಸಿವಿರ್ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಪುರಾವೆಗಳು ಇಲ್ಲದ ಕಾರಣ ಅದನ್ನು ಕೈಬಿಡಬಹುದು ಎಂದು ಹೇಳಿದ್ದಾರೆ. ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಇತರ ಔಷಧಗಳ ಬಗ್ಗೆ ಮಾತನಾಡಿದ ಅವರು, ರೆಮ್ ಡೆಸಿವಿರ್ ಪರಿಣಾಮಕಾರಿ ಎನ್ನುವುದರ ಕುರಿತು ಯಾವುದೇ ಪುರಾವೆಗಳು ಇಲ್ಲ. ಎಲ್ಲಾ ಪ್ರಾಯೋಗಿಕ ಔಷಧಿಗಳು ಮತ್ತು ಪ್ಲಾಸ್ಮಾ ಥೆರಪಿಯನ್ನು ಈಗ ಕೈಬಿಡಲಾಗಿದೆ. ಅದೇ ರೀತಿ ಯಾವುದೇ ಪುರಾವೆಗಳಿಲ್ಲದ ಕಾರಣ ರೆಮ್ ಡೆಸಿವಿರ್ ಕೂಡ ಶೀಘ್ರದಲ್ಲೇ ಕೈಬಿಡಬಹುದು ಎಂದು ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಬಿಡುಗಡೆ ಮಾಡಿದ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಕೊರೋನಾ ವೈರಸ್ ಗೆ ಪ್ಲಾಸ್ಮಾ ಚಿಕಿತ್ಸೆ ಬಳಕೆಯನ್ನು ಕೈಬಿಡಲಾಗಿದೆ.