alex Certify SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಬ್ಲಾಕ್​ ಫಂಗಸ್​ ಕೇಸ್​: ಇಂಜೆಕ್ಷನ್​ಗಾಗಿ ಕೇಂದ್ರಕ್ಕೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಾಜ್ಯದಲ್ಲಿ ನೂರರ ಗಡಿ ದಾಟಿದ ಬ್ಲಾಕ್​ ಫಂಗಸ್​ ಕೇಸ್​: ಇಂಜೆಕ್ಷನ್​ಗಾಗಿ ಕೇಂದ್ರಕ್ಕೆ ಬೇಡಿಕೆ

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಭೀಕರ ತಾಂಡವವಾಡುತ್ತಿರೋದ್ರ ಬೆನ್ನಲ್ಲೇ ಬ್ಲಾಕ್​ ಫಂಗಸ್​ ಸೋಂಕಿತರ ಸಂಖ್ಯೆ ಕ್ರಮೇಣವಾಗಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಒಟ್ಟು ನೂರಕ್ಕೂ ಹೆಚ್ಚು ಬ್ಲಾಕ್​ ಫಂಗಸ್​ ಕೇಸ್​ಗಳು ವರದಿಯಾಗಿದ್ದು ಇಂಜೆಕ್ಷನ್​ ಅಭಾವ ತಲೆದೋರಿದೆ.

ಬ್ಲಾಕ್​ ಫಂಗಸ್​ ಸೋಂಕಿನಿಂದ ಬಳಲುತ್ತಿರುವವರಿಗೆ ಲಿಪೊಸೋಮಲ್​ ಆಂಪೊಟೆರಿಸಿನ್​ ಬಿ ಎಂಬ ಇಂಜೆಕ್ಷನ್​ನ್ನು ಅನಿಯಮಿತವಾಗಿ ನೀಡಬೇಕು. ಒಬ್ಬರಿಗೆ ಕನಿಷ್ಟ 50 ಡೋಸ್​ ಇಂಜೆಕ್ಷನ್​ ಅವಶ್ಯಕತೆ ಇದೆ. ಆದರೆ ರಾಜ್ಯದ ಬಳಿ ಸದ್ಯ 450 ವಯಲ್​ ಇಂಜೆಕ್ಷನ್​ ಮಾತ್ರ ಲಭ್ಯವಿದೆ. ಈ ಇಂಜೆಕ್ಷನ್​ಗಳನ್ನ ಮೈಲಾನ್ ಕಂಪನಿಯಿಂದ ಖರೀದಿ ಮಾಡಲಾಗಿದೆ.

ರಾಜ್ಯ ಸರ್ಕಾರ ಭಾರತ್​ ಬಯೋಟೆಕ್​ ಬಳಿ 550 ಆಂಪೊಟೆರಿಸಿನ್ ​ಗೆ ಬೇಡಿಕೆ ಇಟ್ಟಿತ್ತು. ಆದರೆ ಭಾರತ್​ ಬಯೋಟೆಕ್​ ಇಲ್ಲಿಯವರೆಗೆ ಇಂಜೆಕ್ಷನ್​ ಪೂರೈಕೆ ಮಾಡಿಲ್ಲ. ಇನ್ನು ಈಗಾಗಲೇ ಬ್ಲಾಕ್​ ಫಂಗಸ್​ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ 20 ಸಾವಿರ ವಯಲ್ಸ್​ಗಾಗಿ ಬೇಡಿಕೆ ಇಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...