ಕೇಂದ್ರ ಸರ್ಕಾರಿ ನೌಕರರಿಗೆ ಬೇಸರದ ಸುದ್ದಿಯೊಂದಿದೆ. ಡಿಎ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಡಿಎ ಹೆಚ್ಚಳದ ಘೋಷಣೆಯನ್ನು ಸರ್ಕಾರ ಜೂನ್ ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಕೇಂದ್ರ ಉದ್ಯೋಗಿಗಳಿಗೆ ಡಿಎ ಹೆಚ್ಚಳವು ಮೂಲ ವೇತನದ ಕನಿಷ್ಠ ಶೇಕಡಾ 4ರಷ್ಟಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನವರಿ 1, 2021ರಂದು ಡಿಎ ಹೆಚ್ಚಳ ಘೋಷಣೆ ಮಾಡಬೇಕಿತ್ತು. ಆದ್ರೆ ಇದ್ರಲ್ಲಿ ವಿಳಂಬದ ಹಿಂದಿನ ಕಾರಣವನ್ನು ವಿವರಿಸಿದ ಜೆಸಿಎಂ ಅಧಿಕಾರಿಗಳು ಡಿಒಪಿಟಿ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಇದು ವಿಳಂಬವಾಗಿದೆ ಎಂದಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಡಿಎ ಹೆಚ್ಚಳದ ಘೋಷಣೆಯಾಗಬೇಕಿತ್ತು. ಆದ್ರೆ ಅದೀಗ ಜೂನ್ ಗೆ ಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಜೂನ್ 2021ರವರೆಗೆ ಸ್ಥಗಿತಗೊಳಿಸಿದೆ. ಡಿಎ, ಡಿಆರ್ ನೀಡುವುದನ್ನು ಜುಲೈ 1 ರಿಂದ ಪುನರಾರಂಭಿಸಲಾಗುವುದು ಎಂದು ಮಾರ್ಚ್ 2021 ರಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದರು.