ಕೋವಿಡ್ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನ ಗೋಮೂತ್ರದಿಂದ ನಿವಾರಿಸಬಹುದು ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಹೇಳಿದ್ದಾರೆ. ತಾನು ಪ್ರತಿದಿನವೂ ಗೋಮೂತ್ರವನ್ನ ಸೇವಿಸುತ್ತಿದ್ದು, ಕೊರೊನಾ ಅಪಾಯದಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾರೆ.
ದಿನನಿತ್ಯ ಸಿಗುವ ಗೋಮೂತ್ರವು ಕೋವಿಡ್ 19ನಿಂದ ಉಂಟಾಗುವ ಶ್ವಾಸಕೋಶ ಸೋಂಕನ್ನ ದೂರ ಮಾಡಲಿದೆ. ನಾನು ತುಂಬಾ ನೋವಿನಲ್ಲಿದ್ದೇನೆ. ಆದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ. ಹಾಗಾಗಿ ನಾನು ಕೊರೊನಾ ವಿರುದ್ಧ ಯಾವುದೇ ಔಷಧಿ ಪಡೆಯುವ ಅವಶ್ಯಕತೆಯೇ ಇಲ್ಲ. ಏಕೆಂದರೆ ನನಗೆ ಕೊರೊನಾವೇ ಬರೋದಿಲ್ಲ ಎಂದು ಪ್ರಗ್ಯಾ ಹೇಳಿದ್ದಾರೆ.
2 ವರ್ಷಗಳ ಹಿಂದೆ ಪ್ರಗ್ಯಾ ಠಾಕೂರ್ ಗೋಮೂತ್ರ ಹಾಗೂ ಡೈರಿ ಉತ್ಪನ್ನಗಳ ಮಿಶ್ರಣವು ನನ್ನನ್ನ ಕ್ಯಾನ್ಸರ್ನಿಂದ ದೂರ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಗ್ಯಾ ಠಾಕೂರ್ ಕೊರೊನಾ ರೀತಿಯ ಲಕ್ಷಣಗಳಿಂದಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ಕೊರೊನಾ ವಿರುದ್ಧ ವೈದ್ಯಕೀಯವಾಗಿ ಸಾಬೀತಾಗದ ಯಾವುದೇ ಪರ್ಯಾಯ ಮಾರ್ಗಗಳನ್ನ ನಂಬದಿರಿ ಎಂದು ವೈದ್ಯರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಅಲ್ಲದೇ ಗೋಮೂತ್ರದಿಂದ ಕೊರೊನಾ ಕಡಿಮೆಯಾಗುವ ಬಗ್ಗೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ ಎನ್ನಲಾಗಿದೆ.
https://www.facebook.com/ndtv/videos/186714259983108/?t=0