ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಬದಲಾಗುವ ಫ್ಯಾಷನ್ ಗೆ ಜನರು ಹೊಂದಿಕೊಳ್ತಿದ್ದಾರೆ. ದೃಷ್ಟಿ ದೋಷವಿರುವವರು ಸಾಮಾನ್ಯವಾಗಿ ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲೇಸರ್ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. ಆದ್ರೆ ಲೆನ್ಸ್ ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಲೆನ್ಸ್ ಬಳಸುವಾಗ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕಾಂಟ್ಯಾಕ್ಟ್ ಲೆನ್ಸ್ ಹೋಲ್ಡರ್ ಬಾಕ್ಸ್ ಸ್ವಚ್ಛವಾಗಿರಬೇಕು. ಬಾಕ್ಸ್ ನಲ್ಲಿ ಧೂಳಿದ್ದರೆ, ಲೆನ್ಸನ್ನು ಬಾಕ್ಸ್ ಗೆ ಹಾಕಿದಾಗ ಲೆನ್ಸ್ ಕೂಡ ಧೂಳಾಗುತ್ತದೆ. ಇದರಿಂದ ಕಣ್ಣಿಗೆ ಹಾನಿಯಾಗುವ ಅಪಾಯವಿದೆ. ಹಾಗಾಗಿ ಲೆನ್ಸ್ ತೆಗೆದ ನಂತರ ಅದನ್ನು ಸ್ವಚ್ಛಗೊಳಿಸುವುದು ಮುಖ್ಯ. ಕಾಂಟ್ಯಾಕ್ಟ್ ಲೆನ್ಸ್ ಹೋಲ್ಡರ್ ಬಾಕ್ಸನ್ನು ಸ್ವಲ್ಪ ಸಮಯದವರೆಗೆ ಸೂರ್ಯನ ಕಿರಣದಡಿ ಇಡಬಹುದು.
ಅಪ್ಪಿತಪ್ಪಿಯೂ ಕಾಂಟ್ಯಾಕ್ಟ್ ಲೆನ್ಸನ್ನು ನೀರಿನಲ್ಲಿ ತೊಳೆಯಬೇಡಿ. ನೀರಿನ ಕಣಗಳು ಅದಕ್ಕೆ ಅಂಟಿಕೊಳ್ಳುತ್ತವೆ. ಇದ್ರಿಂದ ಕಣ್ಣಿನಲ್ಲಿ ಸಮಸ್ಯೆ ಕಾಡಬಹುದು. ಸದಾ ಕಾಂಟ್ಯಾಕ್ಟ್ ಲೆನ್ಸ್ ಕ್ಲೀನಿಂಗ್ ಲಿಕ್ವಿಡ್ ನಿಂದಲೇ ಸ್ವಚ್ಛಗೊಳಿಸಿ.
ಕಾಂಟ್ಯಾಕ್ಟ್ ಲೆನ್ಸ್ ಬಳಸುವ ವೇಳೆ ಸದಾ ಕೈಗಳನ್ನು ಸ್ವಚ್ಛಗೊಳಿಸಬೇಕು. ಕೈನಲ್ಲಿರುವ ಸೂಕ್ಷ್ಮ ಕಣಗಳು ಲೆನ್ಸ್ ಗೆ ಅಂಟಿಕೊಂಡು ಕಣ್ಣನ್ನು ಹಾನಿಗೊಳಿಸುತ್ತದೆ.
ಇದಲ್ಲದೆ ತುಂಬಾ ಸಮಯ ಲೆನ್ಸ್ ಹಾಕಿಕೊಂಡಿರಬೇಡಿ. ಹೊರಗೆ ಹೋಗುವ ವೇಳೆ ಲೆನ್ಸ್ ಬದಲು ಗ್ಲಾಸ್ ಬಳಸಿ. ಮಲಗುವ ವೇಳೆ ಲೆನ್ಸ್ ತೆಗೆದಿಡಿ. ಪ್ರತಿ ಮೂರು ತಿಂಗಳಿಗೊಮ್ಮೆ ಲೆನ್ಸ್ ಬದಲಿಸಿ.