ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಗಡಿಗಳನ್ನು ಬಂದ್ ಮಾಡಲಾಗಿದೆ. ಕೆಲ ರಾಜ್ಯಗಳಲ್ಲಿ ಜಿಲ್ಲಾ ಗಡಿಗಳು ಬಂದ್ ಆಗಿವೆ. ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು ಜನರಿಗೆ ಸಾಧ್ಯವಾಗ್ತಿಲ್ಲ. ನಗರ ಪ್ರದೇಶಗಳಲ್ಲಿ ಓಡಾಡಲೂ ಸಾಧ್ಯವಾಗ್ತಿಲ್ಲ.
ಜನರನ್ನು ಮನೆಯಲ್ಲಿ ಇರುವಂತೆ ಮಾಡಲು ಸರ್ಕಾರ ಅಗತ್ಯ ಸೇವೆಗಳಿಗಾಗಿ ಮಾತ್ರ ಇ-ಪಾಸ್ ಸೌಲಭ್ಯವನ್ನೂ ನೀಡ್ತಿದೆ. ವೆಬ್‌ಸೈಟ್ ಮೂಲಕ ಮಾನ್ಯ ಕಾರಣದೊಂದಿಗೆ ಇ-ಪಾಸ್‌ಗೆ ಅರ್ಜಿ ಸಲ್ಲಿಸಬೇಕು. ಪಾಸ್ ನೀಡುವ ನಿರ್ಧಾರವು ರಾಜ್ಯ ಸರ್ಕಾರದ ಕೈಯಲ್ಲಿದೆ. ದೆಹಲಿ, ಯುಪಿ, ಕೋಲ್ಕತಾ, ಮಹಾರಾಷ್ಟ್ರದಲ್ಲಿ ಆನ್‌ಲೈನ್‌ನಲ್ಲಿ ಇ-ಪಾಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಇಲ್ಲಿದೆ.
ದೆಹಲಿಯಲ್ಲಿ ಇ-ಪಾಸ್ ಗೆ ಅರ್ಜಿ ಸಲ್ಲಿಸಲು https://epass.jantasamvad.org/epass/init/ ವೆಬ್‌ಸೈಟ್‌ಗೆ ಹೋಗಬೇಕು. ಕರ್ಫ್ಯೂ ಸಮಯದಲ್ಲಿ ಪ್ರಯಾಣಕ್ಕಾಗಿ ಇ-ಪಾಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಅಗತ್ಯ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ. ನಂತರ ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ಎಲ್ಲ ಪೂರ್ಣವಾದ ಮೇಲೆ ಇ-ಪಾಸ್ ಉಲ್ಲೇಖ ಸಂಖ್ಯೆ ಸಿಗಲಿದೆ.
ಉತ್ತರ ಪ್ರದೇಶದಲ್ಲಿ Http://164.100.68.164/upepass2/Apply.aspx ವೆಬ್‌ಸೈಟ್‌ಗೆ ಹೋಗಿ, ಪಾಸ್ ಪಡೆಯಬೇಕು. ಫೋನ್ ನಂಬರ್ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಸಲ್ಲಿಸಬೇಕು. ಮೊಬೈಲ್ ನಂಬರ್ ಗೆ ಬರುವ ಒಟಿಪಿ ನಮೂದಿಸಬೇಕು. ನಂತ್ರ ನಿಮಗೆ ಇ-ಪಾಸ್ ನೋಂದಣಿ ಸಂಖ್ಯೆ ಸಿಗಲಿದೆ.
ಕೋಲ್ಕತ್ತಾದಲ್ಲಿ ಇ-ಪಾಸ್ ಪಡೆಯಲು coronapass.kolkatapolice.org ವೆಬ್ಸೈಟ್ ಗೆ ಹೋಗಬೇಕು. ಇಲ್ಲಿ ಹೊಸ ಪುಟ ತೆರೆಯಲಿದೆ. ಅಲ್ಲಿ ಎಲ್ಲ ಮಾಹಿತಿ ಹಾಕಿ ಫಾರ್ಮ್ ಭರ್ತಿ ಮಾಡಬೇಕು. ಇ-ಮೇಲ್ ಅಥವಾ ಎಸ್ಎಂಎಸ್ ಮೂಲಕ ಕ್ಯೂರ್ ಕೋಡ್ ಮೂಲಕ ಇ-ಪಾಸ್ ಸಿಗಲಿದೆ. ಇ-ಪಾಸ್ ಡೌನ್ಲೋಡ್ ಮಾಡಿಕೊಳ್ಳಿ.
ಮಹಾರಾಷ್ಟ್ರದಲ್ಲಿ Https://covid19.mhpolice.in/registrationwebsite ಗೆ ಹೋಗಿ ಇ-ಪಾಸ್ ಗೆ ಅರ್ಜಿ ಸಲ್ಲಿಸಬೇಕು.
ತಮಿಳುನಾಡಿನಲ್ಲಿ Https://tnepass.tnega.org/#/user/pass ವೆಬ್‌ಸೈಟ್‌ಗೆ ಹೋಗಿ 10 ಅಂಕಿಯ ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ. ಎಲ್ಲ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
ಕೇರಳದಲ್ಲಿ Https://covid19jagratha.kerala.nic.in/website ಗೆ ಹೋಗಿ 10 ಅಂಕಿಯ ಮೊಬೈಲ್ ಸಂಖ್ಯೆಯೊಂದಿಗೆ ಹೆಸರು ನೋಂದಾಯಿಸಿ. ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.