alex Certify ತಲೆ ತಿರುಗಿಸುವಂತಿದೆ ಚಿತ್ರ ವಿಚಿತ್ರ ವಿನ್ಯಾಸದ ಜೀನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಚಿತ್ರ ವಿಚಿತ್ರ ವಿನ್ಯಾಸದ ಜೀನ್ಸ್….!

ಫ್ಯಾಶನ್​ ಲೋಕದಲ್ಲಿ ದಿನಕ್ಕೊಂದು ರೀತಿಯ ಬದಲಾವಣೆಗಳು ಇರುತ್ವೆ. ಒಂದೊಂದು ಕಾಲಕ್ಕೂ ಸೂಕ್ತವಾಗುವಂತಹ ಟ್ರೆಂಡಿ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಕೆಲವೊಂದು ಬಟ್ಟೆಗಳಂತೂ ನಿಮ್ಮ ತಲೆಗೆ ಹುಳಬಿಡುವಂತೆ ಮಾಡಿಬಿಡುತ್ವೆ.

ಕೆಲದಿನಗಳ ಹಿಂದಷ್ಟೇ ರಿಪಡ್​ ಜೀನ್ಸ್ ಭಾರೀ ವಿವಾದವೊಂದನ್ನ ಹುಟ್ಟುಹಾಕಿತ್ತು. ಇದಾದ ಬಳಿಕ ಅನೇಕರು ಬೇಕು ಬೇಕಂತಲೇ ಹರಿದ ಜೀನ್ಸ್ ಧರಿಸಿ ನಮ್ಮ ಡ್ರೆಸ್​ ನಮ್ಮ ವ್ಯಕ್ತಿತ್ವ ಸಾರಲ್ಲ ಎಂಬ ಸಂದೇಶ ಸಾರಿದ್ರು.

ಆದರೆ ಇದೀಗ ಇನ್ನೊಂದು ರೀತಿಯ ಜೀನ್ಸ್​ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದನ್ನ ನೋಡಿದ್ರೆ ನಿಮ್ಮ ಕಣ್ಣನ್ನೇ ನಿಮಗೆ ನಂಬಲು ಸಾಧ್ಯವಾಗದೇ ಇರಬಹುದು. ದಕ್ಷಿಣ ಕೊರಿಯಾದ ಲೆಜೆ ಎಂಬ ಬ್ರ್ಯಾಂಡ್​ ಈ ರೀತಿಯ ವಿಚಿತ್ರ ಜೀನ್ಸ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇದನ್ನ ನೀವು ಸ್ಲ್ಯಾಶ್​​ ಅಥವಾ ಎಲ್​ ಜೀನ್ಸ್ ಎಂದು ಕರೆಯಬಹುದಾಗಿದೆ. ಇದು ಜೀನ್ಸ್​ ಪ್ಯಾಂಟ್​ನ್ನು ಇನ್ನೊಂದು ಹಂತಕ್ಕೆ ಕರೆದೊಯ್ದಿದೆ.

ಇದು ಫ್ರೂಟ್​ ನಿಂಜಾ ಗೇಮ್​ನ್ನು ನೆನಪಿಸುವಂತಹ ಪ್ಯಾಂಟ್​ ಆಗಿದ್ದರೆ ಇದೇ ರೀತಿ ವೈರಲ್​ ಆದ ಇನ್ನೊಂದು ಪ್ಯಾಂಟ್​ ಚೂಪಾದ ಖಡ್ಗದಿಂದ ಕತ್ತರಿಸಿದಂತೆ ಕಾಣಿಸುತ್ತೆ. ವೆಬ್​ಸೈಟ್​​ನಲ್ಲಿ ಈ ಪ್ಯಾಂಟ್​ಗಳು ಲಭ್ಯವಿದ್ದು, ಇವುಗಳ ಬೆಲೆ 30 ಸಾವಿರ ರೂಪಾಯಿ ಆಗಿದೆ. ಈ ಹೊಸ ಫ್ಯಾಶನ್​ ಟ್ರೆಂಡ್​ ಟ್ರೋಲಿಗರ ಬಾಯಿಗೆ ಒಳ್ಳೆಯ ಆಹಾರವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...