ಕೋವಿಡ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇಂದಿಗೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.
ಇದೇ ವೇಳೆ ಕೋಲ್ಕತ್ತಾದ ಖ್ಯಾತ ಶ್ವಾಸಕೋಶ ತಜ್ಞ ಡಾ.ಅನಿರ್ಬನ್ ಬಿಸ್ವಾಸ್ ಅವರು ಫೇಸ್ಬುಕ್ ನಲ್ಲಿ ಲೈವ್ ಬಂದು ಆರೋಗ್ಯ ಕ್ಷೇತ್ರದ ಆತಂಕವನ್ನು ಜನರ ಮುಂದೆ ಪ್ರಸ್ತಾಪಿಸಿದರು. ಮಾತನಾಡುವ ವೇಳೆಯೇ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ವೇಳೆ ಜರ್ಝರಿತರಾದರು.
ಸಂಕಷ್ಟದಲ್ಲಿದ್ದವರಿಗೆ ಯುವತಿಯಿಂದ ಉಚಿತ ʼಆಕ್ಸಿಜನ್ʼ
ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಅವರು, ರೋಗ ಲಕ್ಷಣ ಕಂಡು ಬಂದವರು ತಕ್ಷಣ ಚಿಕಿತ್ಸೆ ಪಡೆಯುವ ಅಗತ್ಯವನ್ನು ಒತ್ತಿ ಹೇಳಿದರು. ಹಾಗೆಯೇ ಪ್ರತಿಯೊಬ್ಬರು ಈ ಸಾಂಕ್ರಾಮಿಕ ರೋಗವನ್ನು ಗಂಭೀರವಾಗಿ ಪರಿಗಣಿಸಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿನಂತಿಸಿದರು.
ಪ್ರಮುಖವಾಗಿ ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸವಾಲಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ ಭಾವುಕತೆಯ ಮಾತನ್ನಾಡಿದರು.
ಈ ವಿಡಿಯೋ ನೋಡಿದ ಫೇಸ್ಬುಕ್ ಬಳಕೆದಾರರು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ, ದೇವರು ನಿಮಗೆ ಹೆಚ್ಚಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ನೀಡಲಿ ಎಂದು ಅಭಿಪ್ರಾಯ ನೀಡಿದ ಕೆಲವರು, ಧನ್ಯವಾದ- ವಂದನೆಗಳನ್ನು ಅರ್ಪಿಸಿದರು.
https://www.youtube.com/watch?v=mu9_Gx85MpQ