alex Certify BIG NEWS: ಕೊರೊನಾಗೆ ಮತ್ತೊಂದು ರಾಮಬಾಣ ರೆಡಿ – DRDO ಅಭಿವೃದ್ದಿಪಡಿಸಿರುವ 2ಡಿಜಿ ಔಷಧಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾಗೆ ಮತ್ತೊಂದು ರಾಮಬಾಣ ರೆಡಿ – DRDO ಅಭಿವೃದ್ದಿಪಡಿಸಿರುವ 2ಡಿಜಿ ಔಷಧಿ ಬಿಡುಗಡೆ

DRDO's Covid Drug 2-DG: 10,000 Packets Of DRDO's Anti-Covid Oral Drug To Be Distributed Tomorrow

ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ತಯಾರಿಸಿರುವ 2 ಡಿಜಿ ಔಷಧಿ ಬಿಡುಗಡೆಯಾಗಿದೆ. ಔಷಧವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಬಿಡುಗಡೆ ಮಾಡಿದ್ದಾರೆ.

ಡಿಆರ್‌ಡಿಒ ಪ್ರಕಾರ, 2-ಡಿಯೋಕ್ಸಿ-ಡಿ-ಗ್ಲೂಕೋಸ್ ಔಷಧಿಯನ್ನು, ಐಎನ್‌ಎಂಎಎಸ್, ಡಾ. ರೆಡ್ಡಿ ಲ್ಯಾಬ್ ನಲ್ಲಿ ಪ್ರಯೋಗ ಮಾಡಲಾಗಿದೆ. ಯಶಸ್ವಿ ಕ್ಲಿನಿಕಲ್ ಪ್ರಯೋಗದ ನಂತ್ರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಔಷಧಿಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮೋದಿಸಿತು. ಈ ಔಷಧಿ ಸಾಚೆಟ್‌ನಲ್ಲಿ ಲಭ್ಯವಾಗಲಿದೆ. ರೋಗಿಗಳು ಇದನ್ನು ನೀರಿನಲ್ಲಿ ಕರಗಿಸಿ ಕುಡಿಯಬೇಕಾಗುತ್ತದೆ.

ಗ್ಲೂಕೋಸ್ ಆಧಾರಿತ ಈ ಔಷಧಿಯನ್ನು ಸೇವಿಸುವುದರಿಂದ ಕೊರೊನಾ ರೋಗಿಗಳು ಕೃತಕ ಆಕ್ಸಿಜನ್ ಹೆಚ್ಚು ಅವಲಂಬಿಸಬೇಕಾಗಿಲ್ಲ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ಕ್ಲಿನಿಕಲ್ ಪ್ರಯೋಗದ ಸಮಯದಲ್ಲಿಯೂ ಈ ಔಷಧಿಯನ್ನು ನೀಡಿದ ಕೊರೊನಾ ರೋಗಿಗಳ ಆರ್‌ಟಿ-ಪಿಸಿಆರ್ ವರದಿ ಶೀಘ್ರದಲ್ಲೇ ನಕಾರಾತ್ಮಕವಾಗಿದೆ. ಈ ಔಷಧವು ನೇರವಾಗಿ ವೈರಸ್‌ನಿಂದ ಪ್ರಭಾವಿತವಾದ ಜೀವಕೋಶಗಳನ್ನು ಸೇರುತ್ತದೆ. ವೈರಸ್ ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುತ್ತದೆ. ವೈರಸ್ ಬೆಳೆಯದಂತೆ ತಡೆಯುತ್ತದೆ. ಶೀಘ್ರದಲ್ಲೇ ಇದು ಇಡೀ ದೇಶದಲ್ಲಿ ಲಭ್ಯವಾಗಲಿದೆ.

Coronavirus News LIVE Updates: DRDO's Anti-Covid Drug 2-DG Launched;  India's Daily Covid Cases Fall

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...