ಚಿಕ್ಕಮಗಳೂರು: ಹಳ್ಳಿ ಹಳ್ಳಿಗಳಿಗೂ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಒಂದೇ ಗ್ರಾಮದ ಬರೋಬ್ಬರಿ 75 ಜನರಲ್ಲಿ ಸೋಂಕು ದೃಢಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಳ್ಳಿಕೊಪ್ಪ ಗ್ರಾಮದಲ್ಲಿ 75 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ: ನಾಳೆಯಿಂದ 15 ದಿನ ಕಂಪ್ಲೀಟ್ ಲಾಕ್ ಡೌನ್
ಇದೇ ವೇಳೆ ವಿಜಯನಗರ ಜಿಲ್ಲೆ ಕೂಡ್ಲಗಿಯ ಬಂಡೆಬಸಾಪುರ ಗ್ರಾಮದಲ್ಲಿ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆದರೂ ಎಚ್ಚೆತ್ತುಕೊಳ್ಳದ ಆರೋಗ್ಯಾಧಿಕಾರಿಗಳು ಬೇಜವಾಬ್ದಾರಿ ಮುಂದುವರೆಸಿದ್ದಾರೆ. ಈ ಗ್ರಾಮದಲ್ಲಿ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದು, ಇದೂವರೆಗೂ ಅಧಿಕಾರಿಗಳು ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ ಎನ್ನಲಾಗಿದೆ.