ವಿಚ್ಛೇದನದ ನಂತ್ರ ಮಕ್ಕಳಿಂದ ದೂರವಾದ ಮಹಿಳೆ ಈಗ ಮಕ್ಕಳಂತೆ ಕಾಣುವ ಗೊಂಬೆಗಳ ಜೊತೆ ಜೀವನ ನಡೆಸುತ್ತಿದ್ದಾಳೆ. ಇದಕ್ಕಾಗಿ ಆಕೆ ಸಾಕಷ್ಟು ಖರ್ಚು ಮಾಡಿದ್ದಾಳೆ. ಯುಎಸ್ ನಗರ ವರ್ಜೀನಿಯಾದಲ್ಲಿ ವಾಸಿಸುತ್ತಿರುವ 42 ವರ್ಷದ ಲಿಜ್ ವ್ಯಾಟ್ಸನ್ ಗೊಂಬೆ ಜೊತೆ ವಾಸವಾಗಿದ್ದಾಳೆ.
ಲಿಜ್ ವ್ಯಾಟ್ಸನ್ 2010ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಳು. ಇಬ್ಬರು ಮಕ್ಕಳ ಲಿಜ್, ಎರಡನೇ ಪತಿಯಿಂದ ಗಂಡು ಮಗು ಪಡೆದಿದ್ದಾಳೆ. ತಂದೆಯಿಂದ ಮಕ್ಕಳು ದೂರವಿರಲು ಸಾಧ್ಯವಾಗದ ಕಾರಣ ಮಕ್ಕಳನ್ನು ಪತಿ ಬಳಿ ಕಳುಹಿಸಿದ ಲಿಜ್, ಮಕ್ಕಳು ದೂರವಾದ ನೋವು ಮರೆಯಲು ಗೊಂಬೆ ಆಸರೆ ಪಡೆದಿದ್ದಾಳೆ. 2016 ರಲ್ಲಿ ಮತ್ತೆ ತಾಯಿಯಾಗುವುದಾಗಿ ಘೋಷಿಸಿದ್ದಳು. ಒಂದು ಗೊಂಬೆಯನ್ನು ತನ್ನ ಮನೆಗೆ ತಂದಳು. ಲಿಜ್ ವಿಚ್ಛೇದನ ಪಡೆದಿದ್ದು, ಮಕ್ಕಳು ತಂದೆ ಜೊತೆಗಿದ್ದಾರೆ. ಮಕ್ಕಳಿಂದ ದೂರವಾದ ಲಿಜ್ ಈ ದುಃಖದಿಂದ ಹೊರ ಬರಲು ಈ ಪ್ಲಾನ್ ಮಾಡಿದ್ದಾಳೆ. ಮಕ್ಕಳಂತೆ ಕಾಣುವ ಗೊಂಬೆ ಜೊತೆ ವಾಸವಾಗಿದ್ದಾಳೆ. ಈ ಗೊಂಬೆಗಳ ಖರೀದಿಗೆ ಆಕೆ ಸಾಕಷ್ಟು ಖರ್ಚು ಮಾಡಿದ್ದಾಳೆ.
ಗೊಂಬೆ ಬಗ್ಗೆ ವಾಟ್ಸಾಪ್ ಹಾಗೂ ಯುಟ್ಯೂಬ್ ಮೂಲಕ ಲಿಜ್ ತಿಳಿದುಕೊಂಡಿದ್ದಳು. ನಂತ್ರ ಗೊಂಬೆಗಳ ಖರೀದಿ ಶುರು ಮಾಡಿದ್ದಳು. ಗೊಂಬೆಗಳನ್ನು ಸಿಲಿಕಾನ್ ಹಾಗೂ ವಿನೈಲ್ ನಿಂದ ಮಾಡಲಾಗಿದೆ. ಗೊಂಬೆಗಳು ನಿಜ ಮಕ್ಕಳಂತೆ ಕಾಣುತ್ವೆ. ಈವರೆಗೆ 9 ಬೊಂಬೆಗಳನ್ನು ಖರೀದಿ ಮಾಡಿರುವ ಲಿಜ್, ಅವುಗಳಿಗೆ ಹೆಸರಿಟ್ಟಿದ್ದಾಳೆ.