ಲಕ್ಷದ್ವೀಪದಲ್ಲಿರುವ ಕಲ್ಪೇನಿ ಎಂಬಲ್ಲಿ 75 ವರ್ಷದ ಕೋವಿಡ್ ರೋಗಿಯನ್ನ ಕೊಚ್ಚಿಗೆ ಸ್ಥಳಾಂತರಗೊಳಿಸುವ ಸಲುವಾಗಿ ಭಾರತೀಯ ನೌಕಾಪಡೆಯು ತನ್ನ ಸೇವೆಯನ್ನ ವಿಸ್ತರಿಸಿದೆ.
ದಕ್ಷಿಣ ನೇವಲ್ ಕಮಾಂಡ್ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಕುತ್ತಿಗೆ ಮುರಿತದಿಂದ ಬಳಲುತ್ತಿರುವ ಕೋವಿಡ್ ರೋಗಿಯನ್ನ ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಮೂಲಕ ಬುಧವಾರ ಕರೆದೊಯ್ಯಲಾಯಿತು. ಈ ವ್ಯಕ್ತಿಯನ್ನ ಬುಧವಾರ ಐಎನ್ಹೆಚ್ಸಿ ಸಂಜೀವನಿ ನೌಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುಟಿಎಲ್ ಆಡಳಿತ ಕೋರಿಕೆಯ ಮೇರೆಗೆ ನೇವಲ್ ಕಮಾಂಡ್ ಒಪ್ಪಿಗೆ ನೀಡಿದ ಬಳಿಕ ರೋಗಿಗೆ ವೈದ್ಯಕೀಯ ಆರೈಕೆಯನ್ನ ನೀಡಲಾಗ್ತಿದೆ. ನೌಕಾ ಆಸ್ಪತ್ರೆಯಲ್ಲಿ ಲಕ್ಷದ್ವೀಪದ ನಿವಾಸಿಗಳಿಗೆ 10 ಬೆಡ್ಗಳನ್ನ ಕಾಯ್ದಿರಿಸಲಾಗಿದೆ.
ಈ ನಡುವೆ ಭಾರತೀಯ ನೌಕಾಪಡೆ ಎಂಪಿವಿ ಮೇಘನಾ ಹಡಗಿನ ಮೂಲಕ ಬುಧವಾರ ಮಧ್ಯಾಹ್ನ ಆಂಡ್ರೋತ್ ದ್ವೀಪಲ್ಲೆ 13 ಆಮ್ಲಜನಕ ಸಿಲಿಂಡರ್ಗಳನ್ನ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ. ಈ ಹಡಗು ಇದೀಗ ಕವರಟ್ಟಿ ದ್ವೀಪದಲ್ಲಿ 25 ಸಿಲಿಂಡರ್ಗಳನ್ನ ಪೂರೈಸಿ ಹಾಗೂ ಅಮಿನಿ ದ್ವೀಪದಲ್ಲಿದ್ದ ಆರು ಸಿಲಿಂಡರ್ಗಳನ್ನ ಸಾಗಿಸಿದೆ.