ಆಗಿಂದಾಗ್ಗೆ ಹೊಸ ಹೊಸ ರೆಸಿಪಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುತ್ತದೆ. ಸಂಬಂಧವಿಲ್ಲ, ಊಹಿಸಲೂ ಆಗದ ತಿನಿಸುಗಳನ್ನು ಒಟ್ಟಿಗೆ ಸೇರಿ ಹೊಸ ಖಾದ್ಯವೆಂದು ಅಲಂಕರಿಸಿ ಜಾಲತಾಣದಲ್ಲಿ ಪರಿಚಯಿಸುವ ಗೀಳು ಕೆಲವರದ್ದು.
ಇದೀಗ ಅಂಥದ್ದೇ ಒಂದು ವಿಶೇಷ ಖಾದ್ಯ ಪರಿಚಯವಾಗಿದ್ದು ನೆಟ್ಟಿಗರ ಚರ್ಚೆಗೆ ಆಹಾರವಾಗಿದೆ. ನಟಾಲಿಯಾ ಎಂಬ ಕೇಕ್ ಕಲಾವಿದೆ ಬಟರ್ ಚಿಕನ್ ಕೇಕ್ ತಯಾರಿಸಿದ್ದು, ಇದರ ವಿಡಿಯೋ ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ.
ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರಿ ವಿಶ್ವದಾಖಲೆ..!
‘ಸೈಡ್‌ಸರ್ಫ್ ಕೇಕ್ ಸ್ಟುಡಿಯೋ’ ಎಂಬ ತನ್ನ ಯೂಟ್ಯೂಬ್ ಪುಟದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬೇಸ್ ಮಾಡಲು ಬಟರ್ ಕ್ರೀಮ್ ಅನ್ನು ಬಳಸಿ, ಅಡುಗೆ ತಯಾರಿಸಲು ಬಟ್ಟಲಿನಂತೆ ಅದನ್ನು ರೂಪಿಸಿ, ನಂತರ ಅದನ್ನು ಚಾಕೊಲೇಟ್ ಕವರ್ ನೊಂದಿಗೆ ಸುತ್ತುತ್ತಾಳೆ. ಅಂತಿಮವಾಗಿ ಆ ಕೇಕ್ ನೋಡಲು ಚಿಕನ್ ತುಂಬಿಟ್ಟಂತೆ ಕಾಣಿಸುತ್ತದೆ.
ಏಪ್ರಿಲ್ 19 ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ವೀಡಿಯೊ 2 ಮಿಲಿಯನ್ ವೀಕ್ಷಣೆಗಳಿಸಿದೆ. ಅನೇಕರು ಅಭಿಪ್ರಾಯ ನೀಡಿದ್ದು,