alex Certify ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್​ ಶಿಖರವನ್ನೇರಿ ವಿಶ್ವದಾಖಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್​ ಶಿಖರವನ್ನೇರಿ ವಿಶ್ವದಾಖಲೆ..!

ನೇಪಾಳದ 43 ವರ್ಷದ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಮೌಂಟ್​ ಎವರೆಸ್ಟ್​ ಶಿಖರವನ್ನ ಒಂದೇ ತಿಂಗಳಲ್ಲಿ ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ ದಾಖಲೆಯನ್ನ ನಿರ್ಮಿಸಿದ್ದಾರೆ.

ನೇಪಾಳದ ಸಂಖುವಸಬಾ ಜಿಲ್ಲೆಯ ನಿವಾಸಿಯಾಗಿರುವ ತೆಂಜಿ ಮೇ 7ರಂದು ಎವರೆಸ್ಟ್​ ಶಿಖರವನ್ನ ಏರಿದರು. ಇದಾದ ಬಳಿಕ ಮೇ 11ರಂದು ಮತ್ತೊಂದು ಬಾರಿ ಎವರೆಸ್ಟ್ ಶಿಖರವನ್ನ ಏರಿದ್ದಾರೆ. ಈ ಮೂಲಕ ಕೇವಲ ನಾಲ್ಕು ದಿನಗಳ ಅಂತರದಲ್ಲಿ 2 ಬಾರಿ ಮೌಂಟ್​ ಎವರೆಸ್ಟ್ ಶಿಖರವನ್ನ ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆ ಭಾರತದ ಪರ್ವತಾರೋಹಿ ಅಂಶು ಜಮ್ಸೆನ್ಪಾ ಎಂಬವರು 2017ರಲ್ಲಿ 118 ಗಂಟೆ 15 ನಿಮಿಷ ಅವಧಿಯಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್ ಶಿಖರವನ್ನೇರಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈಗಲೂ ಸಹ ಅಂಶು ಅತ್ಯಂತ ಕಡಿಮೆ ಅವಧಿಯಲ್ಲಿ 2 ಬಾರಿ ಎವರೆಸ್ಟ್ ಶಿಖರ ಏರಿದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಯನ್ನ ಹೊಂದಿದ್ದಾರೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...