ಮಗುವಿನ ಬಾಯಲ್ಲಿ ರಂಧ್ರವಿದೆ ಎಂದು ಭಾವಿಸಿ ಮುಜುಗರಕ್ಕೀಡಾದ ತಾಯಿ….! 15-05-2021 7:07AM IST / No Comments / Posted In: Latest News, International ಮಕ್ಕಳಿಗೆ ಏನಾದ್ರೂ ಆಯ್ತು ಅಂದರೆ ಸಾಕು ತಾಯಿಯಾದವಳು ಚಡಪಡಿಸಿಬಿಡ್ತಾಳೆ. ಅದೇ ರೀತಿ ಇಲ್ಲೊಬ್ಬ ತಾಯಿ ಮಗುವಿನ ಬಾಯಿಯಲ್ಲಿ ತೂತಾಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುಜುಗರಕ್ಕೀಡಾಗಿದ್ದಾಳೆ. ಇಂಗ್ಲೆಂಡ್ನ ಬೇಕಿ ಸ್ಟೈಲ್ಸ್ ಎಂಬಾಕೆ ತಮ್ಮ ಪುತ್ರನ ಬಾಯಿಯಲ್ಲಿ ರಂಧ್ರವಾಗಿದ್ದನ್ನ ಕಂಡು ಹೌಹಾರಿ ಹೋಗಿದ್ದಾಳೆ. ಅದನ್ನ ಮುಟ್ಟಿ ನೋಡೋಣ ಅಂದರೆ ಮಗು ಜೋರಾಗಿ ಅಳುತ್ತಿತ್ತು. ಕೂಡಲೇ ತಾಯಿ ಮಗುವನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ನಾನು ನನ್ನ ಮಗುವನ್ನ ಮುಟ್ಟಲು ಆತ ನನ್ನನ್ನ ಬಿಡಲಿಲ್ಲ. ಒಂದೇ ಸಮನೆ ಅಳಲು ಆರಂಭಿಸಿದ. ನಾನು ನಡುಗುತ್ತಿದ್ದೆ. ಕೂಡಲೇ ನಾನು ತುರ್ತು ಸೇವಾ ಕೇಂದ್ರಕ್ಕೆ ಕರೆದೊಯ್ಯಲು ಮುಂದಾದೆ. ಆದರೆ ನನ್ನ ತಂದೆ ಮಗುವನ್ನ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ರು. ತಂದೆಯ ಮಾತಿನಂತೆ ನಾನು ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದೆ. ಆದರೆ ವೈದ್ಯರು ತಪಾಸಣೆ ಮಾಡಿದ ಬಳಿಕ ಅದು ರಂಧ್ರವಲ್ಲ ಬದಲಾಗಿ ಸ್ಟಿಕ್ಕರ್ ಎಂದು ಹೇಳಿದ್ರು. ಇದರಿಂದ ನನಗೆ ಮಗುವಿಗೆ ಏನಾಗಿಲ್ಲ ಎಂಬ ಖುಷಿ ಒಂದಡೆಯಾದರೆ ಆಸ್ಪತ್ರೆಯಲ್ಲಿ ಮುಜುಗರಕ್ಕೀಡಾದೆನ್ನಲ್ಲಾ ಎಂಬ ನೋವು ಮತ್ತೊಂದೆಡೆ ಇತ್ತು ಎಂದು ತಾಯಿ ಹೇಳಿಕೊಂಡಿದ್ದಾಳೆ.