alex Certify BREAKING NEWS: ʼಸ್ಪುಟ್ನಿಕ್​ ವಿʼ ಲಸಿಕೆಯ ಪ್ರತಿ ಶಾಟ್​​ಗೆ 995.40 ರೂ. ದರ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ʼಸ್ಪುಟ್ನಿಕ್​ ವಿʼ ಲಸಿಕೆಯ ಪ್ರತಿ ಶಾಟ್​​ಗೆ 995.40 ರೂ. ದರ ನಿಗದಿ

ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್​ ವಿ ಪ್ರತಿ ಶಾಟ್​​ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್​ ಔಷಧಾಲಯ ಘೋಷಣೆ ಮಾಡಿದೆ.

ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ ಡೋಸ್​ನ ಬೆಲೆ 948 ರೂಪಾಯಿ ಆಗಿದ್ದು ಇದಕ್ಕೆ 5 ಪ್ರತಿಶತ ಜಿಎಸ್​ಟಿ ಮೊತ್ತವನ್ನ ಸೇರಿಸಿ 995.40 ರೂಪಾಯಿ ನಿಗದಿಯಾಗಿದೆ.
ಆದಾಗ್ಯೂ, ಭಾರತದಲ್ಲೇ ಲಸಿಕೆಯ ಡೋಸ್​ಗಳನ್ನ ತಯಾರು ಮಾಡಿದ್ದಲ್ಲಿ ಈ ದರವು ಕಡಿಮೆಯಾಗಲಿದೆ ಎನ್ನಲಾಗಿದೆ.

ಸ್ಪುಟ್ನಿಕ್​ ವಿ ಲಸಿಕೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ಗುರುವಾರ ಕೇಂದ್ರ ಸರ್ಕಾರ ಈ ಮಾಹಿತಿಯನ್ನ ನೀಡಿತ್ತು.

ಮುಂದಿನ ವಾರದಿಂದ ಸ್ಪುಟ್ನಿಕ್​ ವಿ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಘೋಷಣೆ ಮಾಡಲು ನನಗೆ ಖುಷಿ ಎನಿಸುತ್ತಿದೆ. ರಷ್ಯಾದಿಂದ ಬಂದಿರುವ ಸೀಮಿತ ಪೂರೈಕೆಯ ಲಸಿಕೆಗಳು ಮುಂದಿನ ವಾರದಿಂದ ಮಾರಾಟವಾಗಲಿದೆ ಎಂದು ಭಾವಿಸುತ್ತೇನೆ ಎಂದು ನೀತಿ ಆಯೋಗದ ವಿ.ಕೆ. ಪಾಲ್​ ಮಾಹಿತಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...