ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಸೂಚನೆಗಳಿಗೆ ಪ್ರತಿಕ್ರಿಯಿಸಲು ಹೋಗಿ ಸಿ.ಟಿ. ರವಿ ಹಾಗೂ ಡಿ.ವಿ ಸದಾನಂದ ಗೌಡ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಲಸಿಕೆ ಉತ್ಪಾದನೆಯಾಗದೇ ಇದ್ದರೆ ನಾನು ನೇಣು ಹಾಕಿಕೊಳ್ಳಬೇಕಾ ಎಂಬ ಡಿವಿಎಸ್ ಮಾತಿಗೆ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ ಆದರೆ ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂಬ ಸಿ.ಟಿ. ರವಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿ.ಟಿ. ರವಿಯದ್ದು ದುರಹಂಕಾರದ ಹೇಳಿಕೆಯಾಗಿದೆ. ಸಿ.ಟಿ. ರವಿಗೆ ಕಾನೂನು ಗೊತ್ತಿಲ್ಲ. ಆದರೆ ಸದಾನಂದ ಗೌಡರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸದಾನಂದ ಗೌಡರು ಈ ರೀತಿ ಮಾತನಾಡುತ್ತಾರೆ ಎಂದು ಭಾವಿಸಿರಲಿಲ್ಲ. ಸಾಕಷ್ಟು ಲಸಿಕೆ ಉತ್ಪಾದನೆಯಾಗದಿದ್ರೆ ನೇಣು ಹಾಕಿಕೊಳ್ಳಲಾ ಎಂದು ಕೇಳುವ ನಿಮಗೆ ನಾಚಿಕೆ ಆಗಬೇಕು. ನಿಮಗೆಲ್ಲ ಕೋರ್ಟ್ ತೀರ್ಪು ಲೆಕ್ಕಕ್ಕಿಲ್ವಾ..? ನಿಮ್ಮಿಬ್ಬರ ಹೇಳಿಕೆ ನ್ಯಾಯಾಂಗ ನಿಂದನೆಯಲ್ವಾ..? ನೀವು ಜವಾಬ್ದಾರಿಯುತ ಸ್ಥಾನದಲ್ಲಿರಲು ಲಾಯಕ್ಕಿಲ್ಲ ಎಂದು ಗುಡುಗಿದ್ರು.
ರೈತರಿಗೆ ಭರ್ಜರಿ ಖುಷಿ ಸುದ್ದಿ….! ಇಂದಿನಿಂದ ಖಾತೆ ಸೇರಲಿದೆ 2 ಸಾವಿರ ರೂ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸದಾನಂದ ಗೌಡರು ರಾಜ್ಯದ ಸಿಎಂ ಆಗಿದ್ದವರು. ಈಗ ನಾವೇನು ನೇಣಿಹಾಕಿಕೊಳ್ಳೋದಾ ಎಂದು ಕೇಳ್ತಿದ್ದಾರೆ. ನಿಮಗೆ ನೇಣು ಹಾಕಿಕೊಳ್ಳಿ ಎಂದು ನಾವು ಹೇಳೋದಿಲ್ಲ. ನಿಮಗೆ ವೋಟು ಹಾಕಿದ ತಪ್ಪಿಗೆ ಜನ ಹಾಗೂ ವಿಪಕ್ಷ ಸ್ಥಾನದಲ್ಲಿರುವ ನಾವು ನೇಣು ಹಾಕಿಕೊಳ್ಳಬೇಕಾ..? ನಮ್ಮ ರಾಜ್ಯದಿಂದ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗುಜರಾತ್ಗೆ ಹೋಗುತ್ತಿದ್ದಾಗ ಬಾಯಿ ಮುಚ್ಚಿಕೊಂಡಿದ್ದು ಈಗ ನೇಣು ಹಾಕಿಕೊಳ್ಳುವ ಬಗ್ಗೆ ಮಾತನಾಡ್ತೀರಾ ಎಂದು ಪ್ರಶ್ನೆ ಮಾಡಿದ್ರು.