ವಾಷಿಂಗ್ಟನ್‌ನ ಮಿಲ್ವಾಕೀ ನಗರದಲ್ಲಿ ಇರುವ ಬೇಕರಿಯೊಂದು ಇತ್ತೀಚೆಗೆ ಕಳ್ಳತನದ ಕೃತ್ಯಕ್ಕೆ ತುತ್ತಾಯಿತು. ಒಬ್ಬ ವ್ಯಕ್ತಿ ಬೇಕರಿಗೆ ನುಗ್ಗಿ ಕೆಲವು ಸಲಕರಣೆಗಳೊಂದಿಗೆ ಸಾಕಷ್ಟು ಹಣ ಕದ್ದಿದ್ದ.
ಇದರಿಂದ ಸಿಟ್ಟಿಗೆದ್ದ ಬೇಕರಿ ಮಾಲೀಕ ಬೇಕರಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಶಂಕಿತನ ಚಿತ್ರವನ್ನು ಕುಕೀಸ್ ಮೇಲೆ ಮುದ್ರಿಸಿ, ‘ಟೇಕ್ ಎ ಬೈಟ್ ಔಟ್ ಆಫ್ ಕ್ರೈಮ್’ ಎಂಬ ಸಾಲನ್ನೂ ಹಾಕಿದ್ದಾರೆ.
ಅವುಗಳನ್ನು ಮೇ 2 ರಂದು ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು. ಸ್ಥಳೀಯ ಸಮುದಾಯವು ಅದನ್ನು ಖರೀದಿಸಿ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಬಹುದು ಎಂಬುದು ಬೇಕರಿ ಮಾಲೀಕನ ಆಶಯವಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಬೇಕರಿ ಮಾಲೀಕನ ಈ ಪ್ರಯೋಗ ಯಶಸ್ವಿಯಾಗಿದೆ, ಸ್ಥಳೀಯರು ವಿವಿಧ ಸುಳಿವುಗಳನ್ನು ಪೊಲೀಸ್ ಠಾಣೆಗೆ ಕರೆ ಮಾಡಿ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ಒಂದು ವಾರದ ಬಳಿಕ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬೇಕರಿಯು ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
https://www.facebook.com/CanforaBakery/posts/1173721103066874