ಬೆಂಗಳೂರು: ರಸಗೊಬ್ಬರ ದರ ಏರಿಕೆಯಿಂದ ಕಂಗಾಲಾಗಿದ್ದ ರೈತರಿಗೆ ಶುಭ ಸುದ್ದಿ ಸಿಕ್ಕಿದೆ. ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದು, ರಸಗೊಬ್ಬರ ದರ ಏರಿಕೆಯಿಂದ ರೈತರು ಕಂಗಾಲಾಗಿದ್ದರು.
ಇದೇ ಸಂದರ್ಭದಲ್ಲಿ ಗೊಬ್ಬರ ದರ ಇಳಿಕೆಗೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ಈ ಕುರಿತು ಭರವಸೆ ನೀಡಿದ್ದು, ರೈತರಿಗೆ ಯಾವುದೇ ಹೊರೆಯಾಗದಂತೆ ಡಿಎಪಿ, ಎನ್.ಪಿ.ಕೆ. ಸೇರಿದಂತೆ ಇತರೆ ರಸಗೊಬ್ಬರ ದರ ಇಳಿಕೆ ಕ್ರಮ ಕೈಗೊಳ್ಳಲಾಗಿದೆ. ಹಳೆಯ ದರದಲ್ಲಿ ರಸಗೊಬ್ಬರ ದೊರಕಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.