alex Certify BIG NEWS: ಅಕ್ಷಯ ತೃತೀಯದಂದು 1 ರೂ.ಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ಷಯ ತೃತೀಯದಂದು 1 ರೂ.ಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ

ನಾಳೆ, ಮೇ 14ರಂದು ಅಕ್ಷಯ ತೃತೀಯ. ಕೊರೊನಾದಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಕಾರಣಕ್ಕೆ ಬಂಗಾರದ ಅಂಗಡಿಗಳು ಬಾಗಿಲು ಹಾಕಿವೆ. ಹಾಗಾಗಿ ಅಕ್ಷಯ ತೃತೀಯದಂದು ಬಂಗಾರ ಖರೀದಿ ಸಾಧ್ಯವಿಲ್ಲ ಎನ್ನುವವರಿಗೊಂದು ಮಾಹಿತಿಯಿದೆ. ನೀವು ಮನೆಯಲ್ಲೇ ಕುಳಿತು 24 ಕ್ಯಾರೆಟ್ ಶುದ್ಧ ಬಂಗಾರವನ್ನು ಖರೀದಿ ಮಾಡಬಹುದು.

ಅಕ್ಷಯ ತೃತೀಯದಂದು ಅನೇಕ ಆಭರಣಕಾರರು ಆಫರ್ ನೀಡ್ತಿದ್ದಾರೆ. ನಿಮಗೆ ಮನೆಯಿಂದಲೇ ಬಂಗಾರ ಖರೀದಿಗೆ ಅವಕಾಶ ನೀಡ್ತಿದ್ದಾರೆ. ಗೂಗಲ್‌ಪೇ, ಪೇಟಿಎಂ ಹೊಂದಿದ್ದರೆ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಅವರ ಗ್ರಾಹಕರಾಗಿದ್ದರೆ, ಶೇಕಡಾ 99.9 ಶುದ್ಧ ಪ್ರಮಾಣೀಕೃತ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಕೇವಲ 1 ರೂಪಾಯಿಗೆ ಖರೀದಿಸಬಹುದು.

ಈ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಎಂಎಂಟಿಸಿ-ಪಿಎಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಎಂಎಂಟಿಸಿ-ಪಿಎಎಂಪಿ ಚಿನ್ನದ ಸಂಸ್ಕರಣೆ ಮತ್ತು ಗಣಿಗಾರಿಕೆ ಕಂಪನಿಗಳು. ನೀವು ಮೇಲಿನ ಯಾವುದೇ ಕಂಪನಿಯಿಂದ ಚಿನ್ನ  ಖರೀದಿಸಿದಾಗ ಆ ಚಿನ್ನವನ್ನು ಎಂಎಂಟಿಸಿ-ಪಿಎಎಂಪಿ ಸುರಕ್ಷತೆಯಲ್ಲಿ ಇಡಲಾಗುತ್ತದೆ. ಎಂಎಂಟಿಸಿ ಚಿನ್ನವು ಶೇಕಡಾ 99.9 ಶುದ್ಧವಾಗಿದೆ. ಇಲ್ಲಿ ಚಿನ್ನ ಖರೀದಿ ಜೊತೆ ಮಾರಾಟ ಕೂಡ ಮಾಡಬಹುದು.

ಅಪ್‌ಸ್ಟಾಕ್ಸ್ ಗೋಲ್ಡ್ ಪ್ಲಾಟ್‌ಫಾರ್ಮ್ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಡಿಜಿಟಲ್ ರೀತಿಯಲ್ಲಿ ಖರೀದಿಸಬಹುದು. ಇಲ್ಲಿ ಕೂಡ ಒಂದು ರೂಪಾಯಿಗೆ ಚಿನ್ನ ಖರೀದಿಸಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...