alex Certify ಹೆಚ್ಚಾಗ್ತಿರುವ ಕೊರೊನಾ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಮುಂದೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚಾಗ್ತಿರುವ ಕೊರೊನಾ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಮುಂದೂಡಿಕೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆಯನ್ನು ಮುಂದೂಡಿದೆ. ಜೂನ್ 27ರಂದು ಪರೀಕ್ಷೆ ನಡೆಯಬೇಕಿತ್ತು. ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವ ಪರೀಕ್ಷೆ ಅಕ್ಟೋಬರ್ 10 ರಂದು ನಡೆಯಲಿದೆ.

ಈ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಪೂರ್ವ, ಮುಖ್ಯ ಮತ್ತು ಸಂದರ್ಶನ ನಡೆಯಲಿದೆ. ಈ ಮೂರರಲ್ಲಿ ಪಾಸ್ ಆದವರು   ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗುತ್ತಾರೆ. ಪ್ರತಿ ವರ್ಷ ಸುಮಾರು 2 ರಿಂದ 2.5 ಲಕ್ಷ ವಿದ್ಯಾರ್ಥಿಗಳು ಪೂರ್ವ ಪರೀಕ್ಷೆ ಬರೆಯುತ್ತಾರೆ.

ನಾಗರಿಕ ಸೇವೆಗಳಿಗೆ ಅಂತಿಮ ಆಯ್ಕೆಯನ್ನು  ಮುಖ್ಯ ಮತ್ತು ಸಂದರ್ಶನಗಳ ಮಾರ್ಕ್ಸ್ ಒಟ್ಟುಗೂಡಿಸಿ ಮಾಡಲಾಗುತ್ತದೆ. ಈ ವರ್ಷ ಕೊರೊನಾ ಹೆಚ್ಚಾಗ್ತಿದ್ದು, ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದೇ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...