ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ಹ್ಯಾಕ್ ವಿದ್ಯಾಮಾನದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಇನ್ ಸ್ಟಾಗ್ರಾಮ್ನಲ್ಲಿ @pgtalal ಎಂಬ ಪುಟಕ್ಕೆ ಭೇಟಿ ನೀಡಿ ಕ್ಲಿಕ್ ಮಾಡಿದರೆ ಫೋನ್ ಫ್ರೀಜ್ ಆಗುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದು, ಜಾಲತಾಣದಲ್ಲಿ ಕಳವಳ ವ್ಯಕ್ತಮಾಡಿದ್ದಾರೆ.
ಈಗ ಯುಕೆ ಮೂಲದ ಯೂಟ್ಯೂಬರ್ ಇನ್ಸ್ಟಾಗ್ರಾಮ್ನ ಈ ಖಾತೆಯ ಹಿಂದಿನ ರಹಸ್ಯವನ್ನು ವಿವರಿಸಿದ್ದಾರೆ.
ಐಫೋನ್ನಲ್ಲಿ ನೋಡಿದಾಗ ಅರೇಬಿಕ್ನ ಕೇವಲ ಒಂದು ಸಾಲನ್ನು ತೋರಿಸುತ್ತದೆ, ಅದು ನಿಜವಾಗಿಯೂ ಕಣ್ಣಿಗೆ ಕಾಣುವಂತಿಲ್ಲ. ಆದಾಗ್ಯೂ, ಬಳಕೆದಾರರು ಟ್ಯಾಪ್ ಮಾಡಿದ ತಕ್ಷಣ ಫೋನ್ಗಳು ತಕ್ಷಣ ಸ್ಥಗಿತಗೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.
ಲೈಂಗಿಕ ಆಟಿಕೆ ಫೋಟೋ ಹಂಚಿಕೊಂಡಿದ್ದಕ್ಕೆ ಕೆಲಸ ಕಳೆದುಕೊಂಡ ಗಾರ್ಡ್…!
ಅರುಣ್ ಮೈನಿ ಮತ್ತು ಆತನ ಸ್ನೇಹಿತರು, ಕೇವಲ ಒಂದು ಕ್ಲಿಕ್ ಮಾಡುವುದರ ಮೂಲಕ ಹೇಗೆ ಫೋನ್ಗಳನ್ನು ಫ್ರೀಜ್ ಮಾಡಲು ಸಾಧ್ಯ ಎಂಬ ಲೆಕ್ಕಾಚಾರ ಮಾಡಿ ವಿವರಣೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಸರ್ವರ್ಗಳಿಗೆ ವಿನಂತಿಗಳನ್ನು ಕಳುಹಿಸುವ ವೈರಿಂಗ್ ಕೋಡ್ಗಳ ಮೂಲಕ ದೋಷ ಸೃಷ್ಟಿಸುವ ಕುರಿತು ಹೇಳಿದ್ದಾರೆ. ಆದರೆ ನಾನು ಹೈಲೈಟ್ ಅನ್ನು ಹೇಗೆ ರಚಿಸಿದೆ ಎಂದು ಜನರಿಗೆ ಹೇಳಲು ಸಾಧ್ಯವಿಲ್ಲ, ಏಕೆಂದರೆ ಇದು ರಹಸ್ಯ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿವಿಧ ಫೋನ್ಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ್ದು ಐಫೋನ್ಗಳ ಎಲ್ಲಾ ಆವೃತ್ತಿಗಳು ಕ್ರ್ಯಾಶ್ ಆಗುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಕೆಲವು ಪ್ರಮುಖ ಆಂಡ್ರಾಯ್ಡ್ ಫೋನ್ಗಳಿಗೆ ಏನೂ ಆಗಿಲ್ಲ.