ಟೇಕಾಫ್ ಆಗುವ ಮೊದಲು ವಿಮಾನದ ತುರ್ತು ನಿರ್ಗಮನ ದ್ವಾರ ಹಾರಿಹೋದ ವಿಚಿತ್ರ ಘಟನೆಯೊಂದು ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ರನ್‌ವೇಯಿಂದ ಬಿದ್ದು ಹೋಗಿದ್ದ ತುರ್ತು ದ್ವಾರ ಎತ್ತಿ ತರಲಾಗಿದೆ. ಈ ಘಟನೆಯಿಂದ ಆ ಸಣ್ಣ ಬೊಟಿಕ್ ಏರ್ಲೈನ್ ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಜೀವ ಭಯವನ್ನು ಅನುಭವಿಸಿದರೆಂದು ಗೊತ್ತಾಗಿದೆ.
ಮೀನಿನ ಕುತ್ತಿಗೆಗೆ ಸಿಲುಕಿಕೊಂಡಿತ್ತು ವೆಡ್ಡಿಂಗ್ ಬ್ಯಾಂಡ್…!
ವರದಿಗಳ ಪ್ರಕಾರ ಘಟನೆಯ ನಂತರ ಆ ವಿಮಾನದ ಇಬ್ಬರು ಪೈಲಟ್‌ಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪ್ರಯಾಣ ಪ್ರಾರಂಭಿಸುವ ಮೊದಲು ಪೈಲಟ್‌ಗಳು ಪೂರ್ವ ಹಾರಾಟದ ಪರಿಶೀಲನಾಪಟ್ಟಿ ಪ್ರಕ್ರಿಯೆ ನಡೆಸಿರಲಿಲ್ಲ.
ಬಾಗಿಲು ಹಾರಿಹೋದಾಗ ವಿಮಾನವು ಗಂಟೆಗೆ 100ಮೈಲು ವೇಗಕ್ಕಿಂತಲೂ ಪ್ರಯಾಣಿಸುತ್ತಿತ್ತು ಎಂದು ಪ್ರಯಾಣಿಕ ಟಾಮ್ ಯೋನ್ ಅಂದಾಜು ಮಾಡಿದ್ದಾರೆ.