ಕೊರೊನಾ ಎರಡನೇ ಅಲೆ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಎರಡನೇ ಅಲೆ ಮಕ್ಕಳು ಹಾಗೂ ವಯಸ್ಕರ ಮೇಲೆ ಹೆಚ್ಚು ದಾಳಿ ನಡೆಸಿದ್ದು, ಜ್ವರ ಹಾಗೂ ಗೆಸ್ಟ್ರೊಯಿಂಟ್ರಿಟಿಸ್‌ನಂತಹ ಲಕ್ಷಣ ಕಾಣಿಸಿಕೊಳ್ಳುತ್ತಿದೆ.
ಮಕ್ಕಳಲ್ಲಿ ಕೊರೊನಾ ಲಕ್ಷಣಗಳು :
ಮಕ್ಕಳಲ್ಲಿಯೂ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಹಿರಿಯರಂತೆ ಮಕ್ಕಳಲ್ಲೂ ಮೊದಲು ಸೌಮ್ಯವಾಗಿ ಕಾಡುವ ಜ್ವರ ನಂತ್ರ ಹೆಚ್ಚಾಗುತ್ತದೆ.
ಮಕ್ಕಳಲ್ಲಿ ಸುಸ್ತು ಕೂಡ ಹೆಚ್ಚಾಗಿರುತ್ತದೆ. ಕೊರೊನಾ ಕಾಣಿಸಿಕೊಂಡ ಶೇಕಡಾ 55ರಷ್ಟು ಮಕ್ಕಳಲ್ಲಿ ಸುಸ್ತು, ಶಕ್ತಿ ಕಳೆದುಕೊಳ್ಳುವ ಸಮಸ್ಯೆ ಕಾಡಿದೆ.
ತಲೆ ನೋವು ಕೊರೊನಾದ ಆರಂಭಿಕ ಲಕ್ಷಣವಲ್ಲ. ಆದ್ರೆ ಮಕ್ಕಳಲ್ಲಿ ತಲೆನೋವು ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಕೋವಿಡ್ ಆರಂಭಿಕ ಲಕ್ಷಣಗಳಲ್ಲಿ ಇದು ಕಂಡು ಬರ್ತಿದೆ.
ಅತಿಸಾರ ಮತ್ತು ವಾಂತಿ ಸಹ ಪ್ರಸ್ತುತ ಕೋವಿಡ್ -19 ನಿಂದ ಬಳಲುತ್ತಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ತಿದೆ. ಅಸಹಜ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಹೊಟ್ಟೆ ಭಾರ ಎಲ್ಲವೂ ಕೊರೊನಾಗೆ ತುತ್ತಾದ ಮಕ್ಕಳಲ್ಲಿ ಕಾಣಿಸಿಕೊಂಡಿದೆ.
ಕೊರೊನಾ ಕಾಣಿಸಿಕೊಂಡ ಮಕ್ಕಳಲ್ಲಿ ಅಲರ್ಜಿ ಮತ್ತು ದದ್ದು ಕಾಣಿಸಿಕೊಂಡಿದೆ.
ಮಕ್ಕಳಲ್ಲಿ ಕೊರೊನಾ ಲಕ್ಷಣ ಸೌಮ್ಯವಾಗಿದ್ದು, ಬೇಗ ಕಡಿಮೆಯಾಗ್ತಿದೆ. ಅವರಿಗೆ ವಿಶೇಷ ಚಿಕಿತ್ಸೆ ಅಗತ್ಯವಿಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಚಿಕಿತ್ಸೆ ನೀಡಬಹುದು. ಆದ್ರೆ ಮನೆಯಲ್ಲಿ ಮಕ್ಕಳಿಗೆ ಯಾವುದೇ ಔಷಧಿ ನೀಡಬೇಡಿ. ವೈದ್ಯರ ಸಲಹೆ ಪಡೆದು ಮಾತ್ರೆ ನೀಡುವುದು ಉತ್ತಮ.