ಕೊರೊನಾ ಸೋಂಕು ತಡೆಯಲು ಲಸಿಕೆ ಮಾತ್ರ ಮದ್ದು. ಮೇ ಒಂದರಿಂದ ದೇಶದಾದ್ಯಂತ ಕೊರೊನಾ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗ್ತಿದೆ. ಕೊರೊನಾ ಲಸಿಕೆಗೆ ಜನರು ಉತ್ಸಾಹ ತೋರುತ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಸಾಕಷ್ಟು ಗೊಂದಲವಿದೆ. ಒಂದು ಡೋಸ್ ಲಸಿಕೆ ಹಾಕಿದ ನಂತ್ರ ನಿಗದಿತ ಸಮಯಕ್ಕೆ ಇನ್ನೊಂದು ಡೋಸ್ ಹಾಕಿಲ್ಲವೆಂದ್ರೆ ಏನು ಮಾಡಬೇಕೆಂಬ ಪ್ರಶ್ನೆ ಕಾಡುತ್ತಿದೆ.
ದೇಶದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಹಾಕಲಾಗ್ತಿದೆ. ಎರಡೂ ಲಸಿಕೆಗೆ ಎರಡು ಡೋಸ್ ಅನಿವಾರ್ಯ. ಒಂದು ಡೋಸ್ ಹಾಕಿದ ನಂತ್ರ 4-6 ವಾರಗಳ ಕಾಲ ಕಾಯಬೇಕು. ನಂತ್ರ ಎರಡನೇ ಡೋಸ್ ಹಾಕಲಾಗುತ್ತದೆ. ಒಂದು ವೇಳೆ ಆರು ವಾರಗಳ ನಂತ್ರವೂ ಲಸಿಕೆ ಹಾಕಿಲ್ಲವೆಂದ್ರೆ ಏನು ಮಾಡ್ಬೇಕು? ಮತ್ತೆ ಎರಡೆರಡು ಇಂಜೆಕ್ಷನ್ ಪಡೆಯಬೇಕಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಆದ್ರೆ ಮತ್ತೆ ಎರಡು ಇಂಜೆಕ್ಷನ್ ಪಡೆಯಬೇಕಾಗಿಲ್ಲ. ತಡವಾದ್ರೂ ಎರಡನೇ ಡೋಸ್ ಪಡೆಯಬಹುದು.
ಮೊದಲ ಡೋಸ್ ನೀಡ್ತಿದ್ದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎರಡನೇ ಡೋಸ್ ತೆಗೆದುಕೊಳ್ಳುವುದು ತಡವಾದ್ರೆ ರೋಗನಿರೋಧಕ ಶಕ್ತಿ ಕಡಿಮೆಯಾಗುವುದಿಲ್ಲ. ತಡವಾದ್ರೆ ಅದ್ರ ಪ್ರಮಾಣ ಕಡಿಮೆಯಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕೆಂದ್ರೆ ಎರಡನೇ ಡೋಸ್ ಪಡೆಯುವುದು ಅನಿವಾರ್ಯ.
ಮೊದಲ ಡೋಸ್ ಪಡೆದ 12 ವಾರಗಳ ನಂತ್ರ ಎರಡನೇ ಡೋಸ್ ನೀಡಲಾಗಿದ್ದು, ಅದು ಸಂಪೂರ್ಣ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಇದ್ರ ಪ್ರಯೋಗ ನಡೆದಿಲ್ಲ. ಯುಕೆ ಹಾಗೂ ಕೆನಡಾದಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸನ್ನು 12 ವಾರಗಳ ನಂತ್ರ ನೀಡಲಾಗಿದೆ. ಅನವಶ್ಯಕ ಕಾರಣಕ್ಕೆ ಡೋಸ್ ಪಡೆಯುವುದನ್ನು ಮುಂದೂಡಬೇಡಿ ಎಂದು ತಜ್ಞರು ಹೇಳಿದ್ದಾರೆ.