alex Certify ನಿಗದಿಯಾಗಿದ್ದ ಮದುವೆ ಮುರಿಯುವಂತೆ ಮಾಡಿದೆ ದುಬಾರಿ ಉಂಗುರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಗದಿಯಾಗಿದ್ದ ಮದುವೆ ಮುರಿಯುವಂತೆ ಮಾಡಿದೆ ದುಬಾರಿ ಉಂಗುರ…!

ತಾನು ಮದುವೆಯಾಗಲಿರುವ ಯುವತಿಗೆ ಖುಷಿ ಪಡಿಸಬೇಕು ಎಂಬ ಆಸೆ ಯಾವ ಹುಡುಗನಿಗೆ ತಾನೇ ಇರೋದಿಲ್ಲ ಹೇಳಿ..? ಅದರಲ್ಲೂ ನಿಶ್ಚಿತಾರ್ಥದ ವೇಳೆಯಂತೂ ಆಕೆಗೆ ವಿಭಿನ್ನವಾದ ಉಂಗುರವನ್ನ ತೊಡಿಸಬೇಕು ಅಂತಾ ಅನೇಕರು ಒಳ್ಳೆಯ ರಿಂಗ್​ಗಾಗಿ ಎಲ್ಲಾ ಕಡೆ ಹುಡುಕಾಡುತ್ತಾರೆ.

ಇದೇ ರೀತಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಗೆ ಬರೋಬ್ಬರಿ 14.47 ಲಕ್ಷ ರೂಪಾಯಿ ನೀಡಿ ವಜ್ರದ ಉಂಗುರವನ್ನ ಖರೀದಿ ಮಾಡಿದ್ದರು. ಆದರೆ ಇಷ್ಟು ದುಬಾರಿ ಬೆಲೆಯ ಉಂಗುರ ಆಕೆಗೆ ಇಷ್ಟವಾಗಿಲ್ಲವಂತೆ..!

27 ವರ್ಷದ ಈಕೆ ಮೊದಲು ಈ ಉಂಗುರವನ್ನ ನೋಡಿ ತುಂಬಾನೇ ಖುಷಿ ಪಟ್ಟಿದ್ದರಂತೆ. ಬಳಿಕ ಆಕೆ ಈ ಉಂಗುರಕ್ಕೆ ಎಷ್ಟು ಹಣ ಖರ್ಚಾಯ್ತು ಎಂದು ಕೇಳಿದ್ದಾಳೆ. ಅದಕ್ಕೆ ಆತ 14.47 ಲಕ್ಷ ರೂಪಾಯಿ ವ್ಯಯಿಸಿದ್ದಾಗಿ ಹೇಳಿದ್ದಾರೆ.

ಉಂಗುರಕ್ಕಾಗಿ ನಾನು ಇಷ್ಟೊಂದು ಹಣವನ್ನ ಖರ್ಚು ಮಾಡಿದ್ದನ್ನ ಕಂಡು ಆಕೆ ಮೊದಲು ಭಾವುಕಳಾಗಿದ್ದಳು. ಆದರೆ ಈ ಹಣಕ್ಕೆ ನಾನು ಇಷ್ಟು ದೊಡ್ಡ ವಜ್ರವನ್ನ ಹೇಗೆ ಖರೀದಿಸಿದೆ ಎಂದು ಆಕೆಗೆ ಅನುಮಾನ ಶುರುವಾಯ್ತು. ನಾನು ಮೋಸ ಹೋಗಿದ್ದೇನೆ ಎಂಬುದನ್ನ ಪರಿಶೀಲಿಸಲು ಆಕೆ ರಶೀದಿಯನ್ನ ಕೇಳಿದಳು. ನಾನು ರಶೀದಿಯನ್ನ ನೀಡಿದೆ. ಇದರಲ್ಲಿ ಆ ವಜ್ರವು ಲ್ಯಾಬ್​​ನಿಂದ ನಿರ್ಮಾಣವಾದ ವಜ್ರ ಎಂಬುದು ಆಕೆಗೆ ತಿಳಿದಿದೆ. ತನಗೆ ನೈಸರ್ಗಿಕ ವಜ್ರದ ಉಂಗುರವನ್ನ ನೀಡಿಲ್ಲ ಎಂದು ಆಕೆ ಬೇಸರಗೊಂಡಿದ್ದಾಳೆ ಎಂದು ರೆಡ್ಡಿಟ್​ನಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾರೆ.

ಆದರೆ ಆಕೆಯ ಈ ವರ್ತನೆ ನನಗೆ ಅನೇಕ ಕಾರಣಗಳಿಂದ ಶಾಕ್​ಗೆ ಒಳಗಾಗುವಂತೆ ಮಾಡಿತು. ನನಗೆ ಮೊದಲಿನಿಂದಲೂ ನೈಸರ್ಗಿಕ ವಜ್ರ ತಯಾರಿಕಾ ಉದ್ಯಮದ ಬಗ್ಗೆ ಅಸಹ್ಯವಿದೆ. ಅಲ್ಲದೇ ಈ ಉಂಗುರ ಖರೀದಿಗೂ ಮುನ್ನ ನಾನು ಆಕೆಯ ಪೋಷಕರು ಹಾಗೂ ಸ್ನೇಹಿತೆಯರ ಬಳಿ ಸಲಹೆಯನ್ನ ಕೇಳಿದ್ದೆ. ಅವರೆಲ್ಲ ಆಕೆ ಲ್ಯಾಬ್​​ನಲ್ಲಿ ತಯಾರಾದ ವಜ್ರದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದೇ ಹೇಳಿದ್ದರು.

ಆಕೆಯನ್ನ ಮನವರಿಕೆ ಮಾಡಲು ನಾನು ನಾನಾ ಕಾರಣಗಳನ್ನ ನೀಡಿದೆ. ಇದು ಪರಿಸರಕ್ಕೆ ಒಳ್ಳೆಯದು. ಹಾಗೂ ನಿನಗೆ ಜಗತ್ತಿನಲ್ಲೇ ಅತ್ಯಂತ ಸುಂದರವಾದ ಉಂಗುರವನ್ನ ನೀಡೋದಷ್ಟೇ ನನ್ನ ಉದ್ದೇಶವಾಗಿತ್ತು ಎಂದೂ ಸಹ ಹೇಳಿದೆ. ಆಕೆಗೆ ವಜ್ರದ ಪ್ರಮಾಣ ಪತ್ರವನ್ನ ನೋಡುವವರೆಗೂ ಅದು ಲ್ಯಾಬ್​ನಲ್ಲಿ ತಯಾರಾದ ವಜ್ರ ಎಂಬುದರ ಬಗ್ಗೆ ಐಡಿಯಾ ಇರಲಿಲ್ಲ ಎಂದು ವ್ಯಕ್ತಿ ಹೇಳಿದ್ದಾರೆ.

ಇದಾದ ಬಳಿಕ ಆಕೆ ಇದೇ ಬೆಲೆಯ ನೈಸರ್ಗಿಕ ಉಂಗುರವನ್ನ ತರುವಂತೆ ಹೇಳಿದ್ದಾಳೆ. ಆದರೆ ಇದಕ್ಕೆ ಆತ ಒಪ್ಪಿಗೆ ನೀಡಲಿಲ್ಲ. ಈ ಸಂಬಂಧ ಕೊನೆಗಾಣಿಸಲು ತಯಾರಿದ್ದೇನೆ. ಆದರೆ ಉಂಗುರವನ್ನ ಬದಲಿಸುವ ಮಾತೇ ಇಲ್ಲ ಎಂದು ಯುವತಿಗೆ ಹೇಳಿದ್ದಾರೆ.

ಇದರಿಂದ ಕೋಪಗೊಂಡ ಮಹಿಳೆ ಪೋಷಕರ ಮನೆಗೆ ತೆರಳಿದ್ದಾಳೆ. ಇದಾದ ಬಳಿಕ ಪೋಷಕರು ಹಾಗೂ ಆಕೆಯ ಸ್ನೇಹಿತರೂ ಸಹ ಉಂಗುರವನ್ನ ಅಂಗಡಿಯಲ್ಲಿ ಬದಲಾಯಿಸು ಎಂದರು. ಆದರೆ ನಾನಿದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ರೆಡಿಟ್​ನಲ್ಲಿ ಶೇರ್​ ಮಾಡಿದ್ದಾರೆ.

ಈ ಕತೆಯನ್ನ ಓದಿದ ನೆಟ್ಟಿಗರು ಈ ವ್ಯಕ್ತಿಯ ಪರ ನಿಂತಿದ್ದಾರೆ. ಪ್ರೀತಿ ಮುಂದೆ ವಜ್ರಕ್ಕೆ ಬೆಲೆ ಇಲ್ಲ. ಆಕೆಗೆ ನಿಮ್ಮ ಆಯ್ಕೆಗಿಂತ ವಜ್ರವೇ ಮುಖ್ಯ ಎನಿಸಿದರೆ ನೀವು ಬೇರೆ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳೋದು ಒಳಿತು ಎಂದು ಸಲಹೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...