ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಶುರುವಾಗಿರೋದ್ರ ಬೆನ್ನಲ್ಲೇ ಲಸಿಕೆ ಹಂಚಿಕೆ ವಿಚಾರದಲ್ಲಿ ಸರ್ಕಾರದ ಹಿನ್ನಡೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 45 ವರ್ಷ ಮೇಲ್ಪಟ್ಟವರಿಗೆ ಅವಧಿ ಮೀರಿದ್ದರು 2ನೇ ಡೋಸ್ ನೀಡಲಾಗದೇ ಇರೋದು ಭಾರೀ ದೊಡ್ಡ ಚಿಂತೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದೆ. ಮೊದಲನೇ ಡೋಸ್ ನೀಡಿದ ಬಳಿಕ ನಿಗದಿತ ಕಾಲಕ್ಕೆ 2ನೇ ಡೋಸ್ನ್ನು ನೀಡಬೇಕು. 2ನೇ ಡೋಸ್ ನೀಡೋದು ಸಹ ಸರ್ಕಾರದ ಜವಾಬ್ದಾರಿಯಾಗಿದೆ. ಮೊದಲ ಡೋಸ್ ಪಡೆದು 6 ವಾರದ ಬಳಿಕ ನೀವು 2ನೇ ಡೋಸ್ ಪಡೆದರೆ ಅದು ವೇಸ್ಟ್ ಎನಿಸಲಿದೆ ಎಂದು ಹೇಳಿದ್ರು.
ಸೋಂಕು ಹೆಚ್ಚಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ಯೋಗೇಶ್ವರ್
ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗಳೆದ ವಿಚಾರವಾಗಿಯೂ ಮಾತನಾಡಿದ ಸಿದ್ದರಾಮಯ್ಯ, ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆಯನ್ನ ಬಯಲಿಗೆಳೆದಿದ್ದರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಆದರೆ ನಾವು ಮಾಡುವ ಕೆಲಸದ ಹಿಂದೆ ಸದುದ್ದೇಶ ಇರಬೇಕು. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಭಾಗಿಯಾಗಿದ್ದಾರೆ. ಬೆಡ್ ಬ್ಲಾಕಿಂಗ್ ವಿರುದ್ಧ ಹೋದ ಅಧಿಕಾರಿ ಮೇಲೆ ಸತೀಶ್ ರೆಡ್ಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಸರ್ಕಾರವನ್ನ ನಡೆಸಲು ಲಾಯಕ್ಕಿಲ್ಲ ಎಂದು ಅವರು ಗುಡುಗಿದ್ರು.