ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ ಸ್ವಲ್ಪ ದೂರ ಮಾತ್ರ ಹರಡುತ್ತಿತ್ತು. ಆದ್ರೀಗ ಡಿಯೋ ರೀತಿಯಲ್ಲಿ ಇಡೀ ಕೋಣೆಯನ್ನು ಆವರಿಸುತ್ತದೆ. ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಜನರಿಗೆ ಅಪಾಯ ಹೆಚ್ಚಾಗುತ್ತಿದೆ. ವೈರಸ್ ಹರಡಲು ಹೊಸ ದಾರಿ ಹುಡುಕಿಕೊಂಡಿದ್ದು, ಇದು ಶೌಚಾಲಯವೆಂದು ತಜ್ಞರು ಹೇಳ್ತಿದ್ದಾರೆ. ಆದ್ರೆ ಇದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.
ಈ ಬಾರಿ ಅತಿಸಾರವು ಕೋವಿಡ್‌ನ ರೋಗಲಕ್ಷಣಗಳಲ್ಲಿ ಒಂದಾಗಿದೆ. ರೋಗಿಯ ಮಲದಲ್ಲಿ ಆರ್ ಎನ್ ಎ ಮತ್ತು ವೈರಸ್‌ನ ಆನುವಂಶಿಕ ಅಂಶ ಕಂಡುಬಂದಿದೆ. ವೈರಸ್ ಮಲದಲ್ಲಿ ಜೀವಂತವಾಗಿ ಉಳಿದು ಸಾಂಕ್ರಾಮಿಕವಾಗಿದ್ದರೆ, ರೋಗಿಯು ಆ ಮಲವನ್ನು ಹೊರಗೆ ಹಾಕಿದಾಗ ಏನಾಗಬಹುದು ಆಲೋಚನೆ ಮಾಡಿ. ಮಲವಿಸರ್ಜನೆ ಮಾಡಿದಾಗ ಗಾಳಿಯಲ್ಲಿ ಸುಮಾರು ಒಂದು ಮಿಲಿಯನ್ ಹೆಚ್ಚುವರಿ ಕಣಗಳು ಗಾಳಿಯಲ್ಲಿ ಸುತ್ತುತ್ತವೆ. ರೆಸ್ಟೋರೆಂಟ್ ಹಾಗೂ ಕಚೇರಿ ಶೌಚಾಲಯದಲ್ಲಿ ಅಪಾಯ ಹೆಚ್ಚು ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಜೋಸೆಫ್ ಜಿ ಹೇಳಿದ್ದಾರೆ. ಅಪಾರ್ಟ್ಮೆಂಟ್ ಗಳ ಶೌಚಾಲಯಗಳಿಂದಲೂ ಸೋಂಕು ಹರಡುವ ಸಾಧ್ಯತೆಯಿದೆ. ಹಿಂದೆ ಕಾಡಿದ್ದ ಅನೇಕ ಸಾಂಕ್ರಾಮಿಕ ರೋಗಗಳಲ್ಲಿಯೂ ಈ ಸಮಸ್ಯೆ ಕಾಡಿತ್ತು.
ಒಂದೇ ಬಾರಿ ಈ ಯುವತಿಗೆ ನೀಡಲಾಗಿದೆ ಕೊರೊನಾದ 6 ಇಂಜೆಕ್ಷನ್….!
ಕೆಲವೊಂದು ಉಪಾಯಗಳ ಮೂಲಕ ಅಪಾಯ ತಪ್ಪಿಸಬಹುದು. ಶೌಚಾಲಯದಲ್ಲಿ ವಾಸನೆ ಬರ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು. ಪೈಪ್ ಸೋರಿಕೆಯಾಗ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಪ್ಲಶ್ ಮಾಡುವಾಗ ಕಮೋಡ್‌ನ ಮುಚ್ಚಳವನ್ನು ಕೆಳಕ್ಕೆ ಇಳಿಸಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಕೊರೊನಾ ರೋಗಿಯಿದ್ದರೆ, ವೈರಸ್ ಗಾಳಿಯ ಮೂಲಕ ನೆರೆಹೊರೆಯವರಿಗೆ ತಲುಪುವುದಿಲ್ಲ. ಶೌಚಾಲಯದ ಕಿಟಕಿಯನ್ನು ತೆರೆದಿಡಿ. ಸ್ನಾನಗೃಹವನ್ನು ಪ್ರತಿದಿನ ಸ್ವಚ್ಛಗೊಳಿಸಿ.
ಕೋವಿಡ್ ರೋಗಿಯ ಮಲದ ಮೂಲಕ ವೈರಸ್ ಹರಡಬಹುದು ಎಂದು ನಂಬಲಾಗಿದೆ. ಹಾಗಾಗಿ ಅಪಾರ್ಟ್ಮೆಂಟ್ ನಲ್ಲಿರುವವರು ಜಾಗೃತಿ ವಹಿಸಬೇಕು. ವಿಜ್ಞಾನಿಗಳು ಕೋವಿಡ್ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಹೊಸ ಸಂಗತಿಗಳು ನಿರಂತರವಾಗಿ ಹೊರಬರುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನಿರಂತರವಾಗಿ ಹೊಸ ಮಾಹಿತಿಯ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ಆದ್ರೆ ಈ ಬಗ್ಗೆ ಅನಗತ್ಯ ಭಯ, ಆತಂಕದ ಅಗತ್ಯವಿಲ್ಲ.