alex Certify ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ: ಆರೋಗ್ಯ ಸಚಿವ ಸುಧಾಕರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ: ಆರೋಗ್ಯ ಸಚಿವ ಸುಧಾಕರ್​​

ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಕರ್ನಾಟಕದ ಮಂದಿಗೆ ಸಂಜೀವಿನಿಯಂತೆ ಇಂದು ಬೆಳಗ್ಗೆ ರೈಲುಗಳ ಮೂಲಕ 6 ಆಕ್ಸಿಜನ್​ ಟ್ಯಾಂಕರ್​ಗಳು ಬಂದಿವೆ. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಜಮ್​ಶೆಡ್​ಪುರದಿಂದ ಹೊರಟಿದ್ದು ರೈಲು ಇಂದು ಮುಂಜಾನೆ ಬೆಂಗಳೂರಿಗೆ ಬಂದು ತಲುಪಿದೆ.

ಈ ಮೂಲಕ ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್​​ ಪೂರೈಕೆ ಮಾಡಿದಂತಾಗಿದೆ. ಇನ್ನು ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​, ಕೇಂದ್ರ ಸರ್ಕಾರ ರಾಜ್ಯಕ್ಕೆ 120 – 125 ಮೆ.ಟನ್​ ಆಕ್ಸಿಜನ್​ ಪೂರೈಕೆ ಮಾಡೋದಾಗಿ ಹೇಳಿತ್ತು. ಅದರಂತೆಯೇ ಇಂದು 6 ಕಂಟೈನರ್​ಗಳಲ್ಲಿ 120 ಮೆ.ಟನ್​​ ಆಕ್ಸಿಜನ್​ನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. ಕೇಂದ್ರ ಸರ್ಕಾರವು ರಾಜ್ಯದ ಎಲ್ಲಾ ಮನವಿಗೆ ಸ್ಪಂದಿಸುತ್ತಿದೆ ಎಂದು ಹೇಳಿದ್ರು.

ಇದೇ ವೇಳೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್​​ಗಳ ಬಗ್ಗೆಯೂ ಮಾತನಾಡಿದ ಸಚಿವ ಸುಧಾಕರ್​, ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನ ನಮ್ಮಲ್ಲೇ ಸಂಪೂರ್ಣವಾಗಿ ಬಳಕೆ ಮಾಡಲು ಅನುಮತಿ ಕೇಳಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಬಳಿ ಮಾತನಾಡಿದ್ದೇನೆ. ಈ ರೀತಿ ರೈಲುಗಳಲ್ಲಿ ಆಮ್ಲಜನಕಗಳು ಬಂದು ತಲುಪಲು ಸಮಯಾವಕಾಶ ಹಿಡಿಯುತ್ತೆ. ಆದರೆ ನಮ್ಮಲ್ಲಿ ತಯಾರಾಗುವ ಆಮ್ಲಜನಕಗಳನ್ನ ನಾವೇ ಬಳಕೆ ಮಾಡಿಕೊಂಡರೆ ಲಾಜಿಸ್ಟಿಕ್​ ಬಳಕೆ ಅವಶ್ಯಕತೆ ಇರೋದಿಲ್ಲ ಎಂದು ಹೇಳಿದ್ದೇನೆ. ಈ ಬಗ್ಗೆ ಕೇಂದ್ರದ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...